Breaking
24 Dec 2024, Tue

ಹೊಸ ಎಲೆಕ್ಟ್ರಿಕ್ ಏರ್‌ಪೋರ್ಟ್ ಟ್ಯಾಕ್ಸಿ ಸೇವೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಲನೆ

ಬೆಂಗಳೂರು: ಖಾಸಗಿ ಕಂಪನಿಯಾದ ‘ರೆಫೆಕ್ಸ್ ಇವೀಲ್ಜ್’ ನಿರ್ವಹಿಸುತ್ತಿರುವ ಹೊಸ ಎಲೆಕ್ಟ್ರಿಕ್ ಏರ್‌ಪೋರ್ಟ್ ಟ್ಯಾಕ್ಸಿ ಸೇವೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ಚಾಲನೆ ನೀಡಿದರು.

ಏರ್‌ಪೋರ್ಟ್ ಆಪರೇಟರ್‌ನ ಸಹಯೋಗದೊಂದಿಗೆ ‘ರೆಫೆಕ್ಸ್ ಇವೀಲ್ಜ್’ ಕಂಪನಿಯು ‘ಏರ್‌ಪೋರ್ಟ್ ಟ್ಯಾಕ್ಸಿ’ ಸೇವೆ ಒದಗಿಸುತ್ತಿದ್ದು, ಈಗಾಗಲೇ 200 ಎಲೆಕ್ಟ್ರಿಕ್ ಕಾರುಗಳು ಕಾರ್ಯಾಚರಿಸುತ್ತಿವೆ. ಇದೀಗ ಇನ್ನೂ 170 ಎಲೆಕ್ಟ್ರಿಕ್ ಕಾರುಗಳು ಸೇವೆಗೆ ಸೇರ್ಪಡೆಯಾದಂತಾಗಿದೆ. ಇ ಟ್ಯಾಕ್ಸಿ ಸೇವೆಗೆ ಚಾಲನೆ ನೀಡಿರುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸಾಮಾಜಿಕ ಮಾಧ್ಯಮ ಎಕ್ಸ್​ ಖಾತೆಯಲ್ಲಿ ಸಂದೇಶ ಪ್ರಕಟಿಸಿದ್ದಾರೆ.

ರೆಫೆಕ್ಸ್ ಇವೀಲ್ಜ್’ ಗ್ರೂಪ್‌ನಿಂದ ನಿಯೋಜಿಸಲಾದ ಮತ್ತು ನಿರ್ವಹಿಸುವ 170 ಎಲೆಕ್ಟ್ರಿಕ್ ಕಾರುಗಳ ಸೇವೆಗೆ ಚಾಲನೆ ನೀಡಿರುವುದರಿಂದ ಸಂತೋಷವಾಗಿದೆ. ಸುಸ್ಥಿರತೆಯ ಕಡೆಗೆ ಬದ್ಧತೆಯನ್ನು ಹೆಚ್ಚಿಸುವ ಮೂಲಕ, ಈ ಎಲೆಕ್ಟ್ರಿಕ್ ಟ್ಯಾಕ್ಸಿಗಳು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ 200 ಎಲೆಕ್ಟ್ರಿಕ್ ಕಾರುಗಳೊಂದಿಗೆ ಸೇರ್ಪಡೆಯಾಗಿವೆ. ನಮ್ಮ ಬೆಂಗಳೂರನ್ನು ಸ್ವಚ್ಛವಾಗಿ ಮತ್ತು ಹಸಿರಾಗಿಡಲು ಸಹಾಯ ಮಾಡಲಿವೆ ಎಂದು ಅವರು ಉಲ್ಲೇಖಿಸಿದ್ದಾರೆ.

ವಿವಿಧ ಮಾದರಿಯ ಎಲೆಕ್ಟ್ರಿಕ್ ಟ್ಯಾಕ್ಸಿಯನ್ನು ಬುಕ್ ಮಾಡಿ ಪ್ರಯಾಣಿಕರು ಬೆಂಗಳೂರಿನ ಯಾವುದೇ ಪ್ರದೇಶದಿಂದ 699 ರೂ.ಗಳಿಗೆ ಏರ್​ಪೋರ್ಟ್​ಗೆ ಪ್ರಯಾಣಿಸುವ ಹೊಸ ಆಫರ್ ಅನ್ನೂ ಕಂಪನಿ ಘೋಷಿಸಿದೆ. ‘ರೆಫೆಕ್ಸ್ ಇವೀಲ್ಜ್’ ಕಂಪನಿಯ ಆ್ಯಪ್​​ನಲ್ಲಿ ಮಾತ್ರ ಈ ಸೇವೆ ದೊರೆಯಲಿದ್ದು, ಮುಂಗಡ ಕಾಯ್ದಿರಿಸುವಿಕೆಗೆ ಅನ್ವಯವಾಗಲಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿರಲಿದೆ ಎಂದು ಕಂಪನಿ ತಿಳಿಸಿದೆ.

Leave a Reply

Your email address will not be published. Required fields are marked *