ಬಂಟ್ವಾಳ: ದ.ಕ ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘ(ರಿ.) ಕೊಂಪದವು ಇದರ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆಯುವ ಹಕ್ಕೊತ್ತಾಯ ಜಾಥದ ಪ್ರಯುಕ್ತ ಕುಡುಬಿ ಸಂಪರ್ಕ ಅಭಿಯಾನದ ಪೂರ್ವಭಾವಿ ಸಭೆಯು ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ, ಕೋರ್ಯಾರು ಕ್ಷೇತ್ರದ ಶ್ರೀ ದುರ್ಗಾ ಸಭಾಭವನದಲ್ಲಿ ನಡೆಯಿತು.
ಈ ಸಭೆಯಲ್ಲಿ ದ.ಕ ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘ ರಿ.ಕೊಂಪದವು ಇದರ ಅಧ್ಯಕ್ಷರು ಹಾಗೂ ಹಕ್ಕೊತ್ತಾಯ ಜಾಥದ ಸಂಚಾಲಕರಾದ ಕೃಷ್ಣ ಕೊಂಪದವು, ದ.ಕ ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘ ರಿ.ಕೊಂಪದವು ಇದರ ಪ್ರಧಾನ ಕಾರ್ಯದರ್ಶಿ ಹಾಗೂ ಹಕ್ಕೊತ್ತಾಯ ಜಾಥದ ಸಹ ಸಂಚಾಲಕರಾದ ಶೇಖರ ಗೌಡ ಬಜ್ಪೆ, ಮಾಜಿ ಅಧ್ಯಕ್ಷರಾದ ಕೊರ್ಗೆ ಗೌಡ, ಕೋಶಾಧಿಕಾರಿ ರಾಮ ಗೌಡ ಗರಡಿ ಮನೆ, ರಾಜ್ಯ ಕುಡುಬಿ ಸಂಘದ ಉಪಾಧ್ಯಕ್ಷರಾದ ರಾಮಯ್ಯ ಗೌಡ, ಕಾರ್ಯಕಾರಿ ಸದಸ್ಯರಾದ ಉದಯ ಬಜ್ಜೋಡಿ, ಸುದರ್ಶನ್ ಕೊಂಪದವು, ವಿಶ್ವನಾಥ ಪುತ್ತಿಗೆ, ವಿಜಯ ಗೌಡ ವಕೀಲರು ಶಿಬ್ರಿಕೆರೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಸುಂದರ ಗೌಡ, ಸಿದ್ಧಕಟ್ಟೆ ವಾಲ್ಯದ ಗುರಿಕಾರರಾದ ಗೋಪಾಲ ಗೌಡ, ೨ನೇ ಗುರಿಕಾರರಾದ ಓಬಯ್ಯ ಗೌಡ ಮತ್ತು ಹತ್ತು ಸಮಸ್ತರು ಉಪಸ್ಥಿತರಿದ್ದರು.