ಭಾರತ ಕೇಂದ್ರ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ
ಇಲಾಖೆಯ ಮಹತ್ವಕಾಂಕ್ಷಿ ಯೋಜನೆಯಾದ ಸ್ವಚ್ಛತಾ ಹೀ ಸೇವಾ -೨೦೨೪
ಕಾರ್ಯಕ್ರಮದ ಪ್ರಯುಕ್ತ ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ
ಕಾಲೇಜಿನ ರಾಷ್ಟ್ರಸೇವಾ ಯೋಜನಾ ಘಟಕದ ವತಿಯಿಂದ ಸ್ವಚ್ಛತೆಯ ಬಗ್ಗೆ
ಅರಿವು ಮೂಡಿಸಲು ಸ್ವಚ್ಛತಾ ಜಾಥಾವನ್ನು ಹಮ್ಮಿಕೊಳ್ಳಲಾಯಿತು.
ಸ್ವಚ್ಛತೆಯ ಮಹತ್ವ ಸಾರುವ ಘೋಷಣೆಗಳು, ಹಸಿ ಕಸ, ಒಣ ಕಸದ
ವ್ಯತ್ಯಾಸ ಘನ ತ್ಯಾಜ್ಯ ನಿರ್ವಹಣೆ ಇವುಗಳ ಬಗ್ಗೆ ಅರಿವು ಮೂಡಿಸುವ
ಜಾಥಾವನ್ನು ಸಿದ್ಧಕಟ್ಟೆ ಮುಖ್ಯರಸ್ತೆಯಲ್ಲಿ ನಡೆಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗಿರೀಶ್ ಭಟ್ ರವರು ಜಾಥಾ ಉದ್ಘಾಟಿಸಿದರು. ಈ
ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಪ್ರೊ.
ಹರಿಪ್ರಸಾದ್ ಶೆಟ್ಟಿ, ರೆಡ್ ಕ್ರಾಸ್ ಸಂಚಾಲಕರಾದ ಹನುಮಂತಯ್ಯ ಜಿಎಚ್,
ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸಂಚಾಲಕರಾದ ಡಾ ಸುಮನ್ ಶೆಟ್ಟಿ,
ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕರಾದ ವಿನಯ ಎಂ ಎಸ್,
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಸುಂದರೇಶ ಎನ್ ಉಪಸ್ಥಿತರಿದ್ದರು.
ಕಾಲೇಜಿನಿಂದ ಪ್ರಾರಂಭಗೊಂಡ ಜಾಗೃತಿ ಜಾಥಾವು ಸಂಗಬೆಟ್ಟು ಗ್ರಾಮ
ಪಂಚಾಯಿತಿಯಿಂದ ಪಟ್ಟಣದ ಚರ್ಚ್ ವರೆಗೂ ಹೋಗಿ ಮತ್ತೆ ಸಿದ್ದಕಟ್ಟೆಯ
ವಾರದ ಮಾರುಕಟ್ಟೆಯಲ್ಲೂ ಸ್ವಚ್ಛತೆಯ ಜಾಗೃತಿಯನ್ನು
ಮೂಡಿಸಿತು. ಅಲ್ಲಿ ಸಂಗಬೆಟ್ಟು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದ
ಸಹಕಾರದೊಂದಿಗೆ ನಾಗರಿಕರನ್ನು ಸೇರಿಸಿಕೊಂಡು ಸ್ವಚ್ಛತೆ ಬಗ್ಗೆ ಅರಿವು
ಮೂಡಿಸುವ ಬೀದಿ ನಾಟಕವನ್ನು ಹಮ್ಮಿಕೊಳ್ಳಲಾಯಿತು.
೧೫ ದಿನದಿಂದ ನಡೆದ ಸ್ವಚ್ಛತಾ ಹಿ ಸೇವಾ – ೨೦೨೪ ಕಾರ್ಯಕ್ರಮದ ಅಂಗವಾಗಿ
ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್ ಘಟಕ, ರೋವರ್ಸ್ ರೆಂಜರ್ಸ್ ಘಟಕ,
ಗ್ರಾಮ ಪಂಚಾಯಿತಿ ಸಂಗಬೆಟ್ಟು, ಹಳೆ ವಿದ್ಯಾರ್ಥಿ ಸಂಘ ಸಿದ್ದಕಟ್ಟೆ, ಮತ್ತು
ಪ್ರಾಥಮಿಕ ಆರೋಗ್ಯ ಕೇಂದ್ರ ರಾಯಿ ಇವರ ಸಹಯೋಗದೊಂದಿಗೆ,
ಸಿದ್ದಕಟ್ಟೆಯ ಮಾರುಕಟ್ಟೆ ಸ್ವಚ್ಛತೆ, ಸ್ವಚ್ಛತೆ ಬಗ್ಗೆ ಭಿತ್ತಿಚಿತ್ರ
ಸ್ಪರ್ಧೆ, ರಕ್ತ ಹೀನತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣಾ
ವೈದ್ಯಕೀಯ ಶಿಬಿರ, ಪ್ರೌಢಶಾಲಾ ಮಕ್ಕಳಿಗೆ ಸ್ವಚ್ಛತೆಯ ಅರಿವಿನ ನಾಟಕ
ಪ್ರದರ್ಶನ ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಯಿತು.
ರಾ. ಸೇ.ಯೋ. ಅಧಿಕಾರಿಯಾದ ಡಾ. ಸುಂದರೇಶ್.ಎನ್ ಈ
ಕಾರ್ಯಕ್ರಮಗಳನ್ನು ಸಂಯೋಜಿಸಿದ್ದರು. ಎನ್ಎಸ್ಎಸ್ ಘಟಕದ
ನಾಯಕರದ ಯಶೋಧರ ಮತ್ತು ಶಿಲ್ಪ ಕಾರ್ಯಕ್ರಮವನ್ನು
ಸಂಘಟಿಸಿದರು.