Breaking
29 Jun 2026, Mon

ಅಪ್ರಾಪ್ತ ಮಗನಿಗೆ ಸ್ಕೂಟರ್ ನೀಡಿದ ತಂದೆಗೆ 27 ಸಾವಿರ ರೂ. ದಂಡ

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ನೀಡಿದ ತಂದೆಗೆ ಕೋರ್ಟ್ ಸಾವಿರಾರು ರೂಪಾಯಿ ದಂಡ ವಿಧಿಸಿ ಮಂಗಳೂರು ನಗರದ ಬಜಪೆಯಲ್ಲಿ ನಡೆದಿದೆ.

ಬಜಪೆ ಪೇಟೆಯಲ್ಲಿ ವಾಹನ ತಪಾಸಣೆ ವೇಳೆ ಟ್ರಿಪಲ್ ರೈಡ್ ಮಾಡಿಕೊಂಡು ಬಂದ ಸ್ಕೂಟರ್ ಸವಾರ ಅಪ್ರಾಪ್ತ ಎಂಬುದು ಪತ್ತೆಯಾದ ಹಿನ್ನೆಲೆಯಲ್ಲಿ ಆತನ ತಂದೆಗೆ ಬರೋಬ್ಬರಿ 27,500 ರೂ. ದಂಡ ವಿಧಿಸಿದೆ.

ಆ. 25ರಂದು ಬಜಪೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಟ್ರಿಪಲ್ ರೈಡ್ನಲ್ಲಿ ಆಗಮಿಸಿದ ಸ್ಕೂಟರನ್ನು ನಿಲ್ಲಿಸಿ ದಾಖಲೆ ಪರಿಶೀಲಿಸಿದ್ದರು.

ವಿಚಾರಣೆ ವೇಳೆ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಸ್ಕೂಟರ್ ಚಲಾಯಿಸಲು ಪೋಷಕರು ವಾಹನ ನೀಡಿರುವುದು ದೃಢಪಟ್ಟಿದೆ. ಈ ಬಗ್ಗೆ ಬಜಪೆ ಪೊಲೀಸರು ದೋಷಾರೋಪಣ ಪಟ್ಟಿ ತಯಾರಿಸಿ ಮಂಗಳೂರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಸ್ಕೂಟರ್ ಮಾಲೀಕನಿಗೆ 27,500 ರೂ.ದಂಡ ವಿಧಿಸಿ ಎಂದು ಆದೇಶಿಸಿದೆ.

Leave a Reply

Your email address will not be published. Required fields are marked *