ಮಲ್ಪೆ: ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟವಿನ ಶ್ರೀ ಬೊಬ್ಬರ್ಯ ದೈವಸ್ಥಾನದ ಬಳಿ ಬೈಕ್‌ನಲ್ಲಿ ಕುಳಿತು ಸಾರ್ವಜನಿಕವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.

ಬಂಧಿತ ಆರೋಪಿಗಳನ್ನು ಮಂಗಳೂರು ಉರ್ವ ಮೂಲದ ಅಚ್ಚುತ ಎನ್, ಉಡುಪಿಯ ಪುನೀತ್ , ಒಡಿಸ್ಸಾ ಮೂಲದ ಚಂದ್ರಕಾಂತ ಎಂದು ಗುರುತಿಸಲಾಗಿದೆ. ಕೊಳಲಗಿರಿಯ ಕಿಶೋರ ಎಂಬಾತನು ಪರಾರಿಯಾಗಿದ್ದಾನೆ.

ಮಲ್ಪೆಯ ಶ್ರೀ ಬೊಬ್ಬರ್ಯ ದೈವಸ್ಥಾನದ ಬಳಿ ಗಾಂಜಾ ಮಾರಾಟ ನಡೆಯುತ್ತಿದ್ದ ಮಾಹಿತಿ ಮೇರೆಗೆ ಮಲ್ಪೆ ಪೊಲೀಸ್ ಠಾಣಾ ಉಪನಿರೀಕ್ಷಕ ಅನೀಲ್ ಕುಮಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿ, ಪೊಲೀಸರು ಬೈಕ್ ಸೀಟ್‌ನ ಕೆಳಭಾಗವನ್ನು ಪರೀಕ್ಷಿಸಿದಾಗ 3000 ಸಾವಿರ ರೂ ಮೌಲ್ಯದ 3 ಗ್ರಾಂ ತೂಕದ ಗಾಂಜಾ, 10,000 ಮೌಲ್ಯದ ಎಂಡಿಎಂಎ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



