Breaking
25 Sep 2026, Fri

ಉಡುಪಿ: ಭಿಕ್ಷಾಟನೆಯಲ್ಲಿ ನಿರತರಾಗಿದ್ದ ಇಬ್ಬರು ಅಪ್ರಾಪ್ತ ಬಾಲಕರ ರಕ್ಷಣೆ

ಉಡುಪಿ: ನಗರದ ಸಿಟಿ ಸೆಂಟ‌ರ್ ಮಾಲ್ ಬಳಿ ಭಿಕ್ಷಾಟನೆಯಲ್ಲಿ ನಿರತರಾಗಿದ್ದ ಇಬ್ಬರು ಅಪ್ರಾಪ್ತ ಬಾಲಕರನ್ನು ರಕ್ಷಿಸಿರುವ ಘಟನೆ ನಡೆದಿದೆ.

ರಕ್ಷಣೆ ಮಾಡಲಾಗಿರುವ ಮಕ್ಕಳನ್ನು, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಮೌಖಿಕ ಆದೇಶದ ಮೇರೆಗೆ, ದೊಡ್ಡಣಗುಡ್ಡೆಯ ಬಾಲಕರ ಬಾಲ ತಾತ್ಕಾಲಿಕ ಪುರ್ನವಸತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಕಾರ್ಯಾಚರಣೆಯಲ್ಲಿ ಮಕ್ಕಳ ಸಹಾಯವಾಣಿ 1098 ಕೇಸ್ ವರ್ಕರ್ ಲಕ್ಷ್ಮೀಕಾಂತ್, ಸೌಮ್ಯ, ರೈಲ್ವೆ ಚೈಲ್ಡ್‌ ಹೆಲ್ತ್ ಡೆಸ್ಕ್ ಸಿಬ್ಬಂದಿ ವಿಶಾಲ್, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *