Breaking
25 Sep 2026, Fri

ಆಟೋರಿಕ್ಷಾದಲ್ಲಿ ಎಂ ಡಿ ಎಂ ಎ ಸಾಗಾಟ – ಆರೋಪಿ ಅರೆಸ್ಟ್

ಕಾಸರಗೋಡು: ನಿಷೇಧಿತ ಮಾದಕ ವಸ್ತು ಎಂ ಡಿ ಎಂ ಎ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಕೊಡಿಯಮ್ಮೆ ಪೂಕಟ್ಟೆ ನಿವಾಸಿ ಎಂ ಅಬ್ದುಲ್ ಅಜೀಜ್ (42) ಎಂದು ಗುರುತಿಸಲಾಗಿದೆ. ಈ ವೇಳೆ ಸಾಗಾಟಕ್ಕೆ ಬಳಸಿದ ಆಟೋ ರಿಕ್ಷಾ ವಶಕ್ಕೆ ಪಡೆಯಲಾಗಿದೆ.

ಮಂಗಳವಾರ ರಾತ್ರಿ ಕೊಡಿಯಮ್ಮೆಯಲ್ಲಿ ವಾಹನ ತಡೆದು ತಪಾಸಣೆ ನಡೆಸಿ ವಿಚಾರಣೆ ನಡೆಸುವಾಗ ಮಾದಕ ವಸ್ತು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ

ಪೊಲೀಸರನ್ನು ಕಂಡಾಗ ಆರೋಪಿ ರಿಕ್ಷಾ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾನೆ.

ಇದರಿಂದ ಸಂಶಯಗೊಂಡ ಪೊಲೀಸರು ಆರೋಪಿಯನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದಾಗ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *