ಬಂಟ್ವಾಳ : ದ.ಕ.ಜಿ ಪ.ಹಿರಿಯ ಪ್ರಾಥಮಿಕ ಶಾಲೆ ಸಜೀಪ ಮೂಡದಲ್ಲಿ ಮುಖ್ಯೋಪಾಧ್ಯರಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ವತ್ಸಲ ಇವರ ಬೀಳ್ಕೊಡುಗೆ ಸಮಾರಂಭ ಇಂದು (ಸೆ. 3) ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಎನ್ ಬಿ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವೇಳೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅವರು ವತ್ಸಲ ಟೀಚರ್ ಶಾಲೆಗೆ ನೀಡಿದ ಸೇವೆಯನ್ನು ಸ್ಮರಿಸಿ ನಿವೃತ್ತಿ ಜೀವನ ಸುಖಮಯವಾಗಲಿ ಎಂಬುದಾಗಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಜೀಪ ಮೂಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ , ಪೂಂಜ ಉಪಾಧ್ಯಕ್ಷ ಸಿದ್ದಿಕ್ , ಕೊಳಕೆ ಗ್ರಾಮ ಪಂಚಾಯಿತಿ ಸದಸ್ಯ ಯೋಗೀಶ್ ಬೆಲ್ಚಡ, ಪ್ರಭಾರ ಮುಖ್ಯೋಪಾಧ್ಯಾಯ ನಿ ಜೆಸಿಂತಾ, ಸಿ .ಆರ್.ಪಿ .ಇಂದಿರಾ , ಶಾಂತಿನಗರ ಶಾಲಾ ಮುಖ್ಯೋಪಾಧ್ಯಾಯಿನಿ ಸುಪ್ರಭಾ , ಮಲಾಯಿ ಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ನಿ .ಲಿಡ್ ವಿನ್ , ಶಿಕ್ಷಕಿಯರಾದ ರೋಹಿಣಿ, ರೇಖಾ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಶಬೀರ್, ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅತಿಥಿ ಶಿಕ್ಷಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕಿ ಮಮತಾ ಶೆಟ್ಟಿ, ಸನ್ಮಾನ ಪತ್ರ ವಾಚಿಸಿದರು, ಶಿಕ್ಷಕಿ ಪದ್ಮಿನಿ. ಧನ್ಯವಾದವಿತ್ತರು.


