Breaking
21 Jun 2026, Sun

ಕಾರ್ಕಳದಲ್ಲಿ ಸ್ನಾನ ಮಾಡಲೆಂದು ಹೋದಾಗ ಕಾಲು ಜಾರಿ ಬಿದ್ದು ಮಹಿಳೆ ಸಾವು

ಕಾರ್ಕಳ : ಕಾಲು ಜಾರಿ ಬಿದ್ದು ಮಹಿಳೆಯೋರ್ವರು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ಆ. 31ರಂದು ನಡೆದಿದೆ.

ರಾಜೀವಿ (50) ಮೃತ ದುರ್ದೈವಿಯಾಗಿದ್ದಾರೆ.

ಇವರು ಮನೆಯ ಹಿಂದುಗಡೆ ಇರುವ ಕೊಟ್ಟಿಗೆಯ ಬಳಿ ಸ್ನಾನ ಮಾಡಲೆಂದು ಹೋದಾಗ ಕಾಲು ಜಾರಿ ಬಿದ್ದು ತಲೆಗೆ ಕಲ್ಲು ತಾಗಿ ಪೆಟ್ಟಾಗಿದೆ ಎಂದು ಹೇಳಲಾಗುತ್ತಿದೆ.

ಈ ವೇಳೆ ಅವರನ್ನು ಚಿಕಿತ್ಸೆಗೆ ಕರೆದೊಯ್ಯಲು 108 ಆಂಬುಲೆನ್ಸ್ ವಾಹನ ಬಂದಿದ್ದು, ಅದರಲಿದ್ದ ವೈದ್ಯರು ಪರೀಕ್ಷಿಸಿ ರಾಜೀವಿಯವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *