ಬೆಳ್ತಂಗಡಿ: ಗಿರೀಶ್ ಮಟ್ಟಣ್ಣವರ್ ವಿರುದ್ಧ ಅಶ್ಲೀಲವಾಗಿ ಮಾತನಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಕುರಿತು ಉಜಿರೆಯ ರಾಜೇಂದ್ರ ದಾಸ್ ಡಿ. ಧರ್ಮಸ್ಥಳ ಎಂಬವರು ಗಿರೀಶ್ ಮಟ್ಟಣ್ಣವರ್ ವಿರುದ್ಧ ದೂರು ನೀಡಿದ್ದಾರೆ.

ಸೆ.1ರಂದು ಉಜಿರೆಯ ರಾಜೇಂದ್ರ ದಾಸ್ ಡಿ. ಅವರು ತಮ್ಮ ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸುತ್ತಿರುವಾಗ, ಗಿರೀಶ್ ಮಟ್ಟಣ್ಣವರ್ ಎಂಬವರು ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡುವಂತೆ ಅಶ್ಲೀಲವಾಗಿ ಮಾತನಾಡಿ, ‘ಜನತಾ ನ್ಯೂಸ್’ ಚಾನಲ್ನಲ್ಲಿ ವೀಡಿಯೋ ಕ್ಲಿಪ್ ಹರಡಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರದಿದೆ.


