ಮೂಡಬಿದ್ರಿ: ತಾಲೂಕಿನ ಕೇಮಾರು ಕಿನ್ನಿಪದವು ನಿವಾಸಿ ಮಹಾಬಲ ನಾಯ್ಕ್ ಇವರ ಮನೆ ಹಾಗೂ ಮಕ್ಕಳ ವಿದ್ಯಾಭ್ಯಾಸ ನಿರ್ವಹಣೆಗೆ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.)ಮಿಜಾರ್ ಕಾರ್ಯ ವಿಭಾಗ ತಂಡದಿಂದ 15,000 ರೂಪಾಯಿ ಧನಸಹಾಯದ ಚೆಕ್ ನ್ನು ನಾರಾಯಣ ಭಟ್ ಇವರ ಮೂಲಕ ಹಸ್ತಾಂತರಿಸಲಾಯಿತು.

ಕೇಮಾರು ಕಿನ್ನಿಪದವು ನಿವಾಸಿ ಮಹಾಬಲ ನಾಯ್ಕ್ ಅವರು ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿದ್ದು ಇತ್ತೀಚಿಗಷ್ಟೇ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದು, ಮನೆಯ ಆಧಾರಸ್ತಂಭ ಕಳೆದುಕೊಂಡಿದ್ದಾರೆ. ಮನೆಯಲ್ಲಿ ದುಡಿಯುವ ಕೈ ಇಲ್ಲದಿರುವುದರಿಂದ ಸಹಾಯ ಮಾಡಿ ಎಂದು ಮನವಿ ಮಾಡಿದ್ದು ಇವರ ಈ ಮನವಿಗೆ ಸ್ಪಂದಿಸಿ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.)ಮಿಜಾರ್ ಕಾರ್ಯ ವಿಭಾಗ ತಂಡದಿಂದ 60ನೇ ಸೇವಾ ಯೋಜನೆ ಅಂಗವಾಗಿ ಧನಸಹಾಯವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ತಂಡದ ಸಂಸ್ಥಾಪಕ ನವೀನ್ ಪಿ ಮಿಜಾರ್, ಕಾರ್ಯದರ್ಶಿ ದಯಾನಂದ ಮಿಜಾರ್, ಹಾಗೂ ಯುವ ಉತ್ಸಾಹಿ ಬಳಗ ಕೇಮಾರು ಇದರ ಟ್ರಸ್ಟಿ ಸುದರ್ಶನ್ ಆಚಾರ್ಯ. ಇದರ ಸದಸ್ಯರಾದ ಪುನೀತ್ ಪೂಜಾರಿ ಉಪಸ್ಥಿತರಿದ್ದರು.



