Breaking
21 Mar 2026, Sat

ಮೂಡುಬಿದಿರೆ: ಸಾವಿರ ಕಂಬದ ಬಸದಿಗೆ ರವೀನಾ ಟಂಡನ್ ಪುತ್ರಿಯಿಂದ ಯಾಂತ್ರೀಕೃತ ಆನೆ ಕೊಡುಗೆ

ಮೂಡುಬಿದಿರೆ: ಬಾಲಿವುಡ್ ನಟಿ ರವೀನಾ ಟಂಡನ್ ಮತ್ತು ಅವರ ಪುತ್ರಿ ರಾಶಾ ಥಡಾನಿ ಅವರು ಮೂಡುಬಿದಿರೆಯ ಐತಿಹಾಸಿಕ ಸಾವಿರ ಕಂಬದ ಬಸದಿಗೆ ಯಾಂತ್ರೀಕೃತ ಆನೆಯನ್ನು ಕೊಡುಗೆಯಾಗಿ ನೀಡಿದ್ದಾರೆ.

ಈ ಹೊಸ ಯಾಂತ್ರಿಕ ಆನೆಯನ್ನು ಪ್ರಸ್ತುತ ಜೈನ ಕಾಶಿಯಲ್ಲಿ ಚಾತುರ್ಮಾಸ ಆಚರಿಸುತ್ತಿರುವ ಆಚಾರ್ಯ 108 ಗುಲಾಬ್ ಭೂಷಣ್ ಮುನಿ ಮಹಾರಾಜ್ ಅನಾವರಣಗೊಳಿಸಿದರು.

3 ಮೀಟರ್ ಎತ್ತರ ಮತ್ತು 800 ಕೆ.ಜಿ ತೂಕವಿರುವ ಈ ಯಾಂತ್ರಿಕೃತ ಆನೆಯನ್ನು ರಬ್ಬರ್, ಫೈಬರ್, ಲೋಹ, ಮೆಶ್, ಫೋಮ್ ಮತ್ತು ಕಬ್ಬಿಣವನ್ನು ಬಳಸಿ ನಿರ್ಮಿಸಲಾಗಿದೆ. ಇದು 5 ಮೋಟಾರ್‌ಗಳ ಸಹಾಯದಿಂದ ಕಾರ್ಯನಿರ್ವಹಿಸಲಿದ್ದು, ವಿದ್ಯುತ್ ಸಂಪರ್ಕ ನೀಡಿದಾಗ ಇದು ನಿಜವಾದ ಆನೆಯ ಚಲನವಲನ ಕಾಣುತ್ತದೆ.

Leave a Reply

Your email address will not be published. Required fields are marked *