Breaking
20 Jun 2026, Sat

ಕಣ್ಣೂರಿನಲ್ಲಿ ನಾಡ ಬಾಂಬ್‌ ಸ್ಪೋಟ: ಕಾರ್ಮಿಕ ಸಾವು

ಕಣ್ಣೂರು: ಬಾಡಿಗೆ ಮನೆಯೊಂದರಲ್ಲಿ ನಾಡ ಬಾಂಬ್‌ಗಳನ್ನು ತಯಾರಿಸುವ ವೇಳೆ ಸ್ಫೋಟಗೊಂಡು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕೇರಳದ ಕಣ್ಣಾಪುರದ ಕೀಝರದಲ್ಲಿ ನಡೆದಿದೆ.

ನಿವೃತ್ತ ಶಾಲಾ ಶಿಕ್ಷಕ ಗೋವಿಂದನ್ ಅವರ ಮನೆಯಲ್ಲಿ ಇಬ್ಬರು ವಾಸವಾಗಿದ್ದರು. ಆದರೆ ಮನೆಯ ಮಾಲಕ ಗೋವಿಂದನ್ ಅವರು ಪಯ್ಯನ್ನೂರಿನಲ್ಲಿ ಅಂಗಡಿಯನ್ನು ನಡೆಸುತ್ತಿದ್ದರಿಂದ ಮನೆಯಲ್ಲಿ ವಲಸೆ ಕಾರ್ಮಿಕ ಮಾತ್ರ ಇದ್ದನು. ಇದೇ ಸಂದರ್ಭದಲ್ಲಿ ಬಾಂಬ್‌ ಸ್ಪೋಟಗೊಂಡಿದ್ದು ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *