ಮುಂಬೈ: ಕಾರ್ಕಳ ವಿಧಾನ ಸಭಾ ಕೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಆ.29ರಂದು ವಿಶ್ವಪ್ರಸಿದ್ಧ ಲಾಲ್‌ಭಾಗ್ ಕಾ ರಾಜಾ ಗಣಪತಿ ದೇವರ ದರ್ಶನ ಪಡೆದರು.

ಮಹಾರಾಷ್ಟ್ರದಲ್ಲಿ ಶ್ರೀಮಂತ ಗಣೇಶ ಎಂದೇ ಪ್ರಸಿದ್ದಿ ಪಡೆದಿರುವ ಕಿಂಗ್ ಸರ್ಕಲ್ ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ವಾರ್ಷಿಕವಾಗಿ ಪೂಜಿಸಲ್ಪಡುವ ಶ್ರೀ ವಿನಾಯಕನ ದರ್ಶನವನ್ನು ಪಡೆದ ಅವರು ಬಳಿಕ ಪ್ರಭಾದೇವಿಯಲ್ಲಿನ ಶ್ರೀ ಸಿದ್ಧಿ ವಿನಾಯಕ ಮಂದಿರದಲ್ಲಿ ಪ್ರಾರ್ಥಿಸಿ, ನಂತರ ಮಹಾನಗರದಲ್ಲಿನ ವಿವಿಧ ಗಣಪತಿ ಮಂಡಲಗಳಿಗೆ ಭೇಟಿ ನೀಡಿದರು.

ಅಂತಿಮವಾಗಿ ಲಾಲ್‌ಭಾಗ್ ಕಾ ರಾಜಾ ಗಣಪತಿ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಂಟ್ಸ್ ಸಂಘ ಮುಂಬಯಿ ಜೊತೆ ಕಾರ್ಯದರ್ಶಿ ಗಿರೀಶ್ ಆರ್. ಶೆಟ್ಟಿ, ಶ್ರೀ ಸಿದ್ಧಿ ವಿನಾಯಕ ಗಣಪತಿ ದೇವಸ್ಥಾನ ಟ್ರಸ್ಟ್‌ನ ಆಡಳಿತ ಮಂಡಳಿ ಟ್ರಸ್ಟಿ ಭಾಸ್ಕರ ಆರ್. ಶೆಟ್ಟಿ ಧಾರಾವಿ, ನ್ಯಾಯವಾದಿ ಗಿರೀಶ್ ಶೆಟ್ಟಿ ಉಡುಪಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಮುನಿಯಾಲ್ ಉದಯ ಶೆಟ್ಟಿ ಅವರು ಉದ್ಯಮಿಯಾಗಿರುವುದರ ಜೊತೆಗೆ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಬಂಟರ ಯಾನೆ ನಾಡವರ ಸಂಘ ಹೆಬ್ರಿ ಅಜೆಕಾರ ವಲಯದ ಅಧ್ಯಕ್ಷರೂ ಆಗಿದ್ದು, ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ, ಗುತ್ತಿಗೆದಾರರೂ ಆಗಿದ್ದಾರೆ.





