ಮೂಡುಬಿದಿರೆ: ಬೈಕ್ ಹಾಗೂ ಆಟೋ ಡಿಕ್ಕಿಯಾಗಿ ವೃದ್ಧ ಸಹಿತ ಮೂವರು ಗಂಭೀರ ಗಾಯಗೊಂಡ ಘಟನೆ ಮೂಡುಬಿದಿರೆ ತಾಲೂಕಿನ ಪುರಸಭೆ ವ್ಯಾಪ್ತಿಯ ಮಹಾವೀರ ಕಾಲೇಜು ಬಳಿ ಆ. 29 ರಂದು ನಡೆದಿದೆ.

ಇಲ್ಲಿನ ವಿಶಾಲನಗರ ಪೆಟ್ರೋಲ್ ಬಂಕ್ ಬಳಿ ಸಂಜೆ 3 ಗಂಟೆಯ ವೇಳೆಗೆ ಈ ಅಪಘಾತ ಸಂಭವಿಸಿದೆ.
ಸದ್ಯ ಗಂಭೀರ ಗಾಯಗೊಂಡವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಗಾಯಗೊಂಡವರ ವ್ಯಕ್ತಿಗಳ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ




