ಉಡುಪಿ: ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ಬಿದ್ದು ನಾಲ್ವರು ಮೀನುಗಾರರು ಅಪಾಯದಿಂದ ಪಾರಾದ ಘಟನೆ ಮಲ್ಪೆಯ ತೊಟ್ಟಂ ಬೀಚ್ ಬಳಿ ಇಂದು(ಆ. 29) ನಡೆದಿದೆ.

ಮೀನುಗಾರರು ಸಮದ್ರಕ್ಕೆ ಇಳಿದ ತಕ್ಷಣವೇ ದೋಣಿ ಮಗುಚಿದ ಮಾಹಿತಿ ತಿಳಿದ ತೊಟ್ಟಂ ವಾರ್ಡ್ ಪುರಸಭೆ ಸದಸ್ಯ ಯೋಗೇಶ್ ಅವರು ವೃತ್ತಿಪರ ಸಮಾಜ ಸೇವಕ ಈಶ್ವರ್ ಮಲ್ಪೆ ಮತ್ತು ಅವರ ತಂಡಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಈಶ್ವರ್ ಮಲ್ಪೆ ಅವರು, ಸ್ಥಳೀಯರಾದ ಪ್ರವೀಣ್ ಮತ್ತು ಉದಯ್ ಅವರೊಂದಿಗೆ ಲೈಫ್ ಜಾಕೆಟ್‌ಗಳನ್ನು ತೆಗೆದುಕೊಂಡು, ನಾಲ್ವರು ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

“ಮಲ್ಪೆಯ ಸಮುದ್ರವು ಅತ್ಯಂತ ಅನಿರೀಕ್ಷಿತ ಮತ್ತು ಪ್ರಕ್ಷುಬ್ಧವಾಗಿದೆ. ಈಜಲು ತಿಳಿದಿದ್ದರೂ ಯಾರೂ ಕೂಡ ನೀರಿಗೆ ಇಳಿಯಬಾರದು. ಸಮುದ್ರದ ಅಲೆಗಳು ಯಾವುದೇ ಮುನ್ಸೂಚನೆಯಿಲ್ಲದೆ ಇದ್ದಕ್ಕಿದ್ದಂತೆ ಏರಬಹುದು. ಮೀನುಗಾರರು ಸಮುದ್ರಕ್ಕೆ ಹೋಗುವಾಗ ಕಡ್ಡಾಯವಾಗಿ ಲೈಫ್ ಜಾಕೆಟ್‌ಗಳನ್ನು ಧರಿಸಬೇಕು” ಎಂದು ಈಶ್ವರ್ ಮಲ್ಪೆ ತಿಳಿಸಿದ್ದಾರೆ.




