ಮಂಗಳೂರು : ನೀರುಮಾರ್ಗ ಸಮೀಪದ ಮಾಣೂರು ಬಳಿ ಕಾರೊಂದು ರಿಕ್ಷಾಕ್ಕೆ ಡಿಕ್ಕಿಯಾಗಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಕಿಶೋರ್ ಕುಮಾರ್ ಎಂದು ಗುರುತಿಸಲಾಗಿದೆ.

ಅಡ್ಯಾರ್ ಕಟ್ಟೆಯಿಂದ ನೀರುಮಾರ್ಗಕ್ಕೆ ತೆರಳುತ್ತಿದ್ದ ರಿಕ್ಷಾ ಹಾಗೂ ಮಾಣೂರು ದೇಗುಲದ ಬಳಿ ವಿರುದ್ಧ ದಿಕ್ಕಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ರಿಕ್ಷಾ ಹೊಂಡಕ್ಕೆ ಬಿದ್ದಿದ್ದು ಚಾಲಕ ಕಿಶೋರ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ದಾಖಲಿಸಿದರೂ ಕಿಶೋರ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




