Breaking
23 Dec 2024, Mon

ವಿಧಾನ ಪರಿಷತ್ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಭಂಡಾರಿ ಬೊಟ್ಯಾಡಿ ಆಯ್ಕೆ

ಮಂಗಳೂರು:ಕೋಟರಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಅಭ್ಯರ್ಥಿಯಾಗಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬೋಟ್ಯಾಡಿ ಆಯ್ಕೆಯಾಗಿದ್ದಾರೆ.

ಯುವಮೋರ್ಚಾ ಜಿಲ್ಲಾಧ್ಯಕ್ಷನಾಗಿ ಮಿಂಚಿದ್ದ ಇವರು ಪರಿವಾರ ಸಂಘಟನೆಯಲ್ಲಿ ಮುಂಚೂಣಿಯ ನಾಯಕನಾಗಿ ಗುರುತಿಸಿಕೊಂಡಿದ್ದರು.ಕಡಿಮೆ ಜನಸಂಖ್ಯೆ ಇರುವ ಭಂಡಾರಿ ಸಮುದಾಯವನ್ನು ಗುರುತಿಸಿ ಈ ಬಾರಿ ಬಿಜೆಪಿ ಟಿಕೆಟ್ ‌ನೀಡುವ ಮೂಲಕ ಅಚ್ಚರಿ ಮೂಡಿಸಿದೆ.

ಈ ಬಾರಿ ಎಂ.ಎಲ್.ಸಿ.ಚುನಾವಣೆಗೆ ಪ್ರಬಲ ಸಮುದಾಯಗಳಾದ ಬಂಟ ಸಮಾಜದ ನಳಿನ್ ಕುಮಾರ್ ಕಟೀಲು ಹಾಗೂ ಮೊಗವೀರ ಸಮಾಜದ ಪ್ರಮೋದ್ ಮದ್ವರಾಜ್ , ಬಿಲ್ಲವ ಸಮುದಾಯದ ಸತೀಶ್ ಸುವರ್ಣ ಹಾಗೂ ಗೀತಾಂಜಲಿ ಸುವರ್ಣ ಅವರ ಹೆಸರುಗಳು ಕೇಳಿ ಬಂದಿತ್ತು.

ಸೆ 26ರಂದು ಚುನಾವಣ ಅಧಿಸೂಚನೆ ಜಾರಿಗೆ ಬಂದಿದ್ದು ನಾಮಪತ್ರ ಸಲ್ಲಿಕೆಗೆ ಅ. 3 ಕೊನೆಯ ದಿನವಾಗಿದೆ, ಅ 7 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ.ಅ 24ರಂದು ಮತ ಏಣಿಕೆ ನಡೆಯಲಿದ್ದು ಫಲಿತಾಂಶ ಹೊರಬೀಳಲಿದೆ.

Leave a Reply

Your email address will not be published. Required fields are marked *