Breaking
23 Dec 2024, Mon

ಪುಂಜಾಲಕಟ್ಟೆ : ಅಂತರಾಜ್ಯ ಮಟ್ಟದ ಸ್ವಸ್ತಿಕ್ ಇಂಡಿಯಾ ಕಪ್ ಗೋಲ್ಡ್ ಮೆಡಲ್ ಕಬಡ್ಡಿ ಉತ್ಸವದ ಲೋಗೋ ಬಿಡುಗಡೆ

ಬಂಟ್ವಾಳ : ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 40ನೇ ವಾರ್ಷಿಕ ಕಬಡ್ಡಿ ಪಂದ್ಯಾಟದ ಪ್ರಯುಕ್ತ ದ.ಕ. ಜಿಲ್ಲಾಅಮೆಚೂರ್‌ ಕಬಡ್ಡಿ ಅಸೋಸಿಯೇಶನ್ಸಹಭಾಗಿತ್ವದಲ್ಲಿ ನ.16 ಮತ್ತು 17ರಂದು ಪುಂಜಾಲಕಟ್ಟೆಯಲ್ಲಿ ನಡೆಯಲಿರುವ ಅಂತಾರಾಜ್ಯ ಮಟ್ಟದ ಸ್ವಸ್ತಿಕ್ ಇಂಡಿಯಾಕಪ್ ಗೋಲ್ಡ್‌ ಮೆಡಲ್ ಕಬಡ್ಡಿ ಉತ್ಸವದ ಲೋಗೋ ಬಿಡುಗಡೆ ಕಾರ್ಯಕ್ರಮ ಬಂಗ್ಲೆ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿನಡೆಯಿತು.

ಇರ್ವತ್ತೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣ ಉಡುಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಬಡ್ಡಿಆಟಗಾರರಿಗೆ ದೇಶದ ಮಣ್ಣಿನೊಂದಿಗೆ’ ಅವಿನಾಭಾವ ಸಂಬಂಧವಿದೆ. ಅದು ಈ ದೇಶದ ಮಣ್ಣಿನ ಆಟ, ಇದಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಅಗತ್ಯ ಎಂದರು.

ಪಂದ್ಯಾಟದ ಲೋಗೋ ಬಿಡುಗಡೆಗೊಳಿಸಿದ ಕಬಡ್ಡಿ ಆಟಗಾರ ಆಕಾಶ್ ಮಂಗಳೂರು ಮಾತನಾಡಿ, ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ಕಬಡ್ಡಿ ಪಂದ್ಯಾಟ ಅಂತಾರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದೆ ಎಂದರು.

ಸ್ಥಾಪಕ ಅಧ್ಯಕ್ಷರಾದ ಎಂ. ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ನಡೆಯುವ ಕಬಡ್ಡಿ ಪಂದ್ಯಾಟಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ನಿರಂತರವಾಗಿ 40ವರ್ಷಗಳಿಂದ ಕಬಡ್ಡಿ ಪಂದ್ಯಾಟ ನಡೆಸುತ್ತಿದ್ದು, ಈ ಬಾರಿ ಬಂಗಾರದ ಪದಕದ ಪ್ರಶಸ್ತಿ ನೀಡಲಾಗುವುದು. ಸಮಾಜದಲ್ಲಿ ಸಾಮರಸ್ಯ, ಬಾಂಧವ್ಯ ಹಾಗೂ ಪ್ರೀತಿ ವಿಶ್ವಾಸಗಳು ಬೆಳೆಯಲು ಕಬಡ್ಡಿ ಸಹಕಾರಿಯಾಗಿದೆ ಎಂದರು.ಕೂಟದಲ್ಲಿ ಐದು ವಿಭಾಗದಲ್ಲಿ ಪ್ರೊ ಮಾದರಿಯ ಮ್ಯಾಟ್ ಕಬಡ್ಡಿ ನಡೆಯಲಿದೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾಬಾಲಕ-ಬಾಲಕಿಯರ ವಿಭಾಗ, ಕಾಲೇಜು,ವಿಭಾಗ ಮತ್ತು ಅಂತಾರಾಜ್ಯ ಮಟ್ಟದ 55ಕೆಜಿ ಹಾಗೂ 65 ಕೆ.ಜಿ. ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟ ನಡೆಯಲಿದೆ ಎಂದರು.

ಕಬಡ್ಡಿ ತೀರ್ಪುಗಾರರ ಸಂಘದಸಂಚಾಲಕ ಪ್ರಾನ್ಸಿಸ್ ವಿವಿ, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ತಾಲೂಕು ಕಾರ್ಯದರ್ಶಿ ಚಂದ್ರಶೇಖರ ಕರ್ಣ,ಪ್ರಮುಖರಾದ ವಿಜಯರೈ, ಡಾ|ರಾಮಕೃಷ್ಣಎಸ್., ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಶಿವಪ್ಪಗೌಡ ನಿನ್ನಿಕಲ್ಲು, ಬಬಿತಾ ದಿನೇಶ್, ಬೇಬಿ ರೇಖ ಶೆಟ್ಟಿ, ದೇವದಾಸ ಆಬುರ, ಎಡ್ವರ್ಡ್ ಡಿಸೋಜ , ಶಾಜಿ ಹುಸೇನ್, ಶೇಖರಪೂಜಾರಿ ಅಗಲ್ದೊಡಿ, ಗಿರೀಶ್ ಸಾಲ್ಯಾನ್ ಹೆಗ್ಗಡೆಬೆಟ್ಟು ಗುತ್ತು, ಸಂತೋಷ್ ಕುಮಾರ್,ಪ್ರಕಾಶ್ ಅನಿಲಡೆ , ಪ್ರವೀಣ್ ಶೆಟ್ಟಿಕುರ್ಡುಮೆ, ಉಮೇಶ್ ಅಲೆಕ್ಕಿ ಹೇಮಂತಕುಮಾರ್‌ ಮೂರ್ಜೆ, ಕ್ಲಬ್, ಗೌರವಾಧ್ಯಕ್ಷ ಅಬ್ದುಲ್ಲಾ ಪಿ,, ಕಬಡ್ಡಿ ಸಂಚಾಲಕ ರಾಜೇಶ್. ಪಿ ಬಂಗೇರ , ಸಹ ಸಂಚಾಲಕ ಅಬ್ದುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ.ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *