ಬಂಟ್ವಾಳ: ಇಂದಿನ ಈ ಡಿಜಿಟಲ್ ಯುಗದಲ್ಲಿ ನೈಜ ವಿಚಾರಗಳಿಗಿಂತ ಸುಳ್ಳು ಸುದ್ದಿಗಳು ಬಹು ಬೇಗ ವೈರಲ್ ಆಗುತ್ತಿವೆ. ಎಲ್ಲೊ ಆದ ಘಟನೆಗಳನ್ನ ಇನ್ನೆಲ್ಲೋ ಆಗಿದೆ ಎಂದು ವೈರಲ್ ಮಾಡುವುದು ಕೆಲವು ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯವಾಗಿದೆ.
ಇದೀಗ ಅಂತದ್ದೆ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಜನರಲ್ಲಿ ಆತಂಕ,ಗೊಂದಲ ಸೃಷ್ಟಿಸಿದೆ.
ಕಳೆದ ಕೆಲ ದಿನಗಳಿಂದ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಸಿಂಹ, ಅದರ ಮರಿಗಳೊಂದಿಗೆ ರಸ್ತೆ ದಾಟುವ ದೃಶ್ಯ ಕಂಡು ಬಂದಿದ್ದು, ಯಾರೋ ಕಿಡಿಗೇಡಿಗಳು ಈ ದೃಶ್ಯವು ಸಿದ್ದಕಟ್ಟೆ -ಮೂಡಬಿದ್ರೆ ಪರಿಸರದೆಂದು ವೈರಲ್ ಮಾಡುತ್ತಿದ್ದು ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ.
ಅಸಲಿಗೆ ಈ ವಿಡಿಯೋ ನಿಖರವಾಗಿ ಯಾವ ರಾಜ್ಯದ್ದು ಎಂದು ಸ್ಪಷ್ಟತೆ ಇಲ್ಲ, ಕೆಲವೊಂದು ಮಾಧ್ಯಮಗಳು ಬೇರೆ ಬೇರೆ ಊರುಗಳನ್ನು ಸೂಚಿಸಿ ವರದಿಯನ್ನು ಮಾಡಿರುತ್ತಾರೆ. ಏನೇ ಆದರೂ ಇದು ನಮ್ಮೂರಿನ ಸುದ್ದಿ ಅಲ್ಲವೇ ಅಲ್ಲ ಎಂಬುದು ಸ್ಪಷ್ಟ..