Breaking
21 Jun 2026, Sun

ಅರಂತೋಡು ಗ್ರಾಮದ ಸುಶ್ಮಿತಾ ಎಂ.ಎ ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆ

ಸುಳ್ಯ: ತಾಲೂಕಿನ ಅರಂತೋಡು ಗ್ರಾಮದ ಮೇಲಡ್ತಲೆಯ ಸುಶ್ಮಿತಾ ಎಂ.ಎ ಇವರು ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿದ್ದಾರೆ.

ಇವರು ದಿ.ನಾಗಪ್ಪ ಗೌಡ ಎಂ.ಎಂ ಮತ್ತು ಜಾನಕಿ ದಂಪತಿಯ ಪುತ್ರಿ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ತಲೆ ಹಾಗೂ ಫ್ರೌಡ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಮರ್ಕಂಜ, ಪಿ.ಯು.ಸಿ ವಿದ್ಯಾಭ್ಯಾಸವನ್ನು ಎನ್.ಎಂ.ಪಿ.ಯು ಅರಂತೋಡಿನಲ್ಲಿ ಪೂರೈಸಿ ನಂತರ ಸುಳ್ಯದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದಾರೆ.

ಪುತ್ತೂರಿನ ತರಬೇತಿ ಅಕಾಡೆಮಿಯೊಂದರಲ್ಲಿ ಬಿ.ಎಸ್.ಎಫ್ ಪರೀಕ್ಷೆಯ ಕೋಚಿಂಗ್ ಪಡೆದು ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸಿದ ಎಸ್.ಎಸ್.ಸಿ ಜಿ.ಡಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *