ಸುರತ್ಕಲ್ : ಎಂ.ಆರ್.ಪಿ.ಎಲ್. ಕಾರ್ಗೋ ಗೇಟ್ ಬಳಿ ಟಿಪ್ಪರ್ ಲಾರಿಯ ಚಕ್ರಕ್ಕೆ ಸಿಲುಕಿ ದ್ವಿಚಕ್ರ ಸಹ ಸವಾರೆಯೊಬ್ಬರು ಸಾವನಪ್ಪಿದ ಘಟನೆ ಆ. 20ರಂದು ನಡೆದಿದೆ.

ಮೃತಪ್ಪಟವರು ಶ್ವೇತಾ (20) ಎಂದು ಗುರುತಿಸಲಾಗಿದೆ.

ಮೃತರು ತನ್ನ ಸಹೋದರನ ಬೈಕ್ ನಲ್ಲಿ ಕಾಟಿಪಳ್ಳ ಕೈಕಂಬದಿಂದ ಸುರತ್ಕಲ್ ಕಡೆಗೆ ತೆರಳುತ್ತಿದ್ದ ಸಂದರ್ಭ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯ ಅಡಿಗೆ ಬಿದ್ದಿದ್ದಾರೆ ಲಾರಿಯು ಹೊಟ್ಟೆಯ ಮೇಲ್ಭಾಗದಿಂದ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ.

ಈ ಕುರಿತು ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.



