Breaking
22 Mar 2026, Sun

ಕಾಸರಗೋಡು: ಜಾನುವಾರು ಸಾಕಾಣಾ ಕೇಂದ್ರದಿಂದ ಸಾಮಾಗ್ರಿಗಳ ಕಳವು : ಐವರು ಪೊಲೀಸ್‌ ವಶಕ್ಕೆ

ಕಾಸರಗೋಡು: ಜಾನುವಾರು ಸಾಕಾಣಾ ಕೇಂದ್ರದಿಂದ ಮೋಟಾರು ಪಂಪ್ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಕಳವುಗೈದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ವಿ.ವಿ ಸಜೀಶ್ (36), ವಿ. ನಿತಿನ್ (31), ಎಂ. ರಾಜೇಶ್ (35) ಸಿಎಚ್ ಪ್ರಶಾಂತ್ ( 42), ಸಿ.ವಿ ವಿಜೇಶ್ (34) ಎಂದು ಗುರುತಿಸಲಾಗಿದೆ.

ಆರೋಪಿಗಳು ಪಿಲಿಕ್ಕೋಡ್ ಕಣ್ಣಾಂಗೈ ನ ಪಿ.ಪ್ರಮೋದ್ ರವರ ಜಾನುವಾರು ಸಾಕಾಣಾ ಕೇಂದ್ರದಿಂದ ಸಾಮಾಗ್ರಿಗಳನ್ನು ಕಳವು ಮಾಡಿ ಬಳಿಕ ಕಳವುಗೈದ ಸಾಮಾಗ್ರಿಗಳನ್ನು ಗುಜರಿ ಅಂಗಡಿಗಳಿಗೆ ಮಾರಾಟ ಮಾಡಿದ್ದರು ಎನ್ನಲಾಗಿದೆ.

ಸದ್ಯ ಪೊಲೀಸರು ಆರೋಪಿಗಳಿಂದ ಸುಮಾರು 1.25 ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *