Breaking
22 Mar 2026, Sun

ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ಇದರ ವಾರ್ಷಿಕ ಮಹಾ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ

ಬಂಟ್ವಾಳ: ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ಇದರ ವಾರ್ಷಿಕ ಮಹಾ ಸಭೆ ಮತ್ತು ಹಿರಿಯ ನಾಗರಿಕ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಬಿ.ಸಿರೋಡು, ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.

ಮಂಗಳೂರಿನ ಹಿರಿಯ ನ್ಯಾಯವಾದಿ, ಸರಕಾರಿ ಅಭಿಯೋಜಕರಾದ ಉದಯಾನಂದ ಎ.ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಒಂದು ಕಾಲದಲ್ಲಿ ಅವಿಭಕ್ತ ಕುಟುಂಬವನ್ನು ಹೊಂದಿ ಹಿರಿಯರಿಂದಲೇ ಮಾರ್ಗದರ್ಶನ ಪಡೆಯುತ್ತಿದ್ದ ದೇಶದಲ್ಲಿ ಇಂದು ಹಿರಿಯ ನಾಗರೀಕರ ಹಕ್ಕು ರಕ್ಷಣಾ ಕಾಯ್ದೆ ಜಾರಿಗೆ ಬಂದಿರುವುದು ನಮ್ಮ ದುರ್ದೈವ .

ಹಿರಿಯರು, ಕಿರಿಯರು ಜೊತೆ ಸೇರಿದಾಗ ಸಮಾಜ ಬಾಂಧವ್ಯ ಬೆಳೆಯುವುದರೊಂದಿಗೆ ಅಭಿವೃದ್ಧಿ ಸಾಧ್ಯ ಎಂದ ಅವರು ಕಿರಿಯರು ಹಿರಿಯರ ಮಾರ್ಗದರ್ಶನದಲ್ಲಿ ನಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಅಧ್ಯಕ್ಷರಾದ ಭಾಸ್ಕರ ಪೆರುವಾಯಿ ಮಾತನಾಡಿ, ಭವಿಷ್ಯದಲ್ಲಿ ಸಂಘದ ಕಟ್ಟಡ ನಿರ್ಮಾಣ ಅಥವಾ ಯಾವುದೇ ಜನಪಯೋಗಿ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಂಘದ ಅಧ್ಯಕ್ಷರಾದ ಸೋಮಯ್ಯ ಹನ್ನೆರಡೆಯವರು ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷರಾದ ಟಿ. ಶೇಷಪ್ಪ ಮಾಸ್ಟರ್ ಪ್ರಸ್ತಾವನೆಗೈದರು. 72 ವರ್ಷ ತುಂಬಿದ ಸಂಘದ ಸದಸ್ಯರಾದ ಕೃಷ್ಣ ಶ್ಯಾಮ್ ಬಿ.ಸಿ.ರೋಡು, ಜನಾರ್ಧನ
ಸಾಲಿಯಾನ್ ವೀರಕಂಭ, ಧರಣಪ್ಪ ಮುಡಿಪು, ಜಿನ್ನಪ್ಪ ಮೂಲ್ಯ ವೀರಕಂಭ, ವಿಶ್ವನಾಥ ಸಾಲಿಯಾನ್
ಸೋರ್ನಾಡು, ನೀಲಪ್ಪ ಸಾಲಿಯಾನ್ ತುಂಬೆ, ಭೋಜ ಮೂಲ್ಯ ಪುಡಿಕಲಕೋಡಿ, ಅಣ್ಣಪ್ಪ ಮೂಲ್ಯ
ಅಂಗರ ಗುಂಡಿ, ಭೋಜ ಸಾಲಿಯಾನ್ ಮೈರಾನ ಪಾದೆ, ಮೋಹನ ಸಾಲಿಯಾನ್ ಅರ್ಕಮೆ, ಡಿ
ಚಂದಪ್ಪ ಮೂಲ್ಯ ಉಪ್ಪಿನಂಗಡಿ, ಕೃಷ್ಣಪ್ಪ ಕುಲಾಲ್ ಕುಪ್ಪಿಲ, ಶೇಷಪ್ಪ ಸಾಲಿಯಾನ್ ಕಳೈ ಅಮ್ಟಾಡಿ,
ಸುಮಿತ್ರಾ ಆರ್ ಉದ್ಯಾವರ ಹೀಗೆ ಒಟ್ಟು 14 ಹಿರಿಯ ಸದಸ್ಯರನ್ನು ವೇದಿಕೆಯಲ್ಲಿ ಶಾಲು ಸ್ಮರಣಿಕೆ,
ಹಾರ, ಪೇಟ, ಫಲ ಪುಷ್ಪ ತಾಂಬೂಲ ನೀಡಿ ಸನ್ಮಾನಿಸಲಾಯಿತು. ಇವರ ವಿವರವನ್ನು ಕಾರ್ಯಕಾರಿ
ಸಮಿತಿ ಸದಸ್ಯರಾದ ಶ್ರೀ ದಿನಕರ ಉದ್ಯಾವರ, ಶ್ರೀಮತಿ ರೋಹಿಣಿ, ಶ್ರೀ ಓಬಯ್ಯ ಮೂಲ್ಯ ಜತೆ
ಕಾರ್ಯದರ್ಶಿ ಶ್ರೀನಿವಾಸ ವಾಚಿಸಿದರು.

ಇದೇ ವೇಳೆ ಆಗಲಿದ ಸದಸ್ಯರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ರಾಮಮೂಲ್ಯ ಮರ್ದೊಳಿ ಅಗಲಿದ ಸದಸ್ಯರ ಮಾಹಿತಿ ನೀಡಿದರು.

ಬಳಿಕ 2025-27ನೇ ಸಾಲಿಗೆ ಕಾಯ೯ಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ದೇವದಾಸ್ ಮಾಸ್ಟರ್ ಕೊಡಾಣ್ ನಡೆಸಿದರು.ಖಜಾಂಚಿ ಸೋಮಪ್ಪ ಬಂಗೇರ ಲೆಕ್ಕ ಪತ್ರ ಮಂಡಿಸಿದರು.

ಈ ಸಂದರ್ಭ ವಸ್ತ್ರೋದ್ಯಮಿ ರಮಾನಂದ ನಾರಾಯಣ ಬಂಗೇರ ನಾಸಿಕ್ ,ಉದ್ಯಮಿ ಮನೋಜ್ ಬಾಸಬೈಲು, ಬಂಟ್ವಾಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾದ ರಮೇಶ ಸಂಚಯಗಿರಿ, ಕರ್ನಾಟಕ ರಾಜ್ಯ ಕರಾವಳಿ ಕುಲಾಲರ ಯುವ ವೇದಿಕೆ ಅಧ್ಯಕ್ಷ ಸುಮಿತ್ ಸಾಲಿಯಾನ್ ಉಪಸ್ಥಿತರಿದ್ದರು.

ಶಾಂಭವಿ ಸೋಮಯ್ಯ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಕಿಟ್ಟು ಮೂಲ್ಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪದ್ಮನಾಭ ಎಂ ವರದಿ ವಾಚಿಸಿ ಕೊನೆಯಲ್ಲಿ ವಂದಿಸಿದರು . ಭಾರತಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು.ಸದಸ್ಯರಾದ ವಿಠಲ ಮೂಲ್ಯ ಜಕ್ರಿಬೆಟ್ಟು, ಕೃಷ್ಣಪ್ಪ ಬಡ್ಡಕಟ್ಟೆ ಸಹಕರಿಸಿದರು.

Leave a Reply

Your email address will not be published. Required fields are marked *