ಮೈಸೂರು: ಹುಣಸೂರು ತಾಲೂಕು ಮನುಗನಹಳ್ಳಿ ಪಂಚಾಯಿತಿಗೆ ಸೇರಿದ ಹಂದರಹಳ್ಳಿ ಗ್ರಾಮದಲ್ಲಿ ಪಂಚಾಯಿತಿ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿ ಹಾಗೂ ಮನುಗನಹಳ್ಳಿ ಪಂಚಾಯಿತಿ ಮತ್ತು ಸಮೃದ್ಧಿ ವಾರ್ತೆ ಪತ್ರಿಕೆ ಹಾಗೂ ಆರ್ ಟಿ ಐ ಮಾಹಿತಿ ಪತ್ರಿಕೆ ವತಿಯಿಂದ ನಾರಾಯಣ ಆಸ್ಪತ್ರೆ ಮತ್ತು ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಸಹಯೋಗದಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು .

ಕಾರ್ಯಕ್ರಮದಲ್ಲಿ PGRSS ಅಧ್ಯಕ್ಷರಾದ ಯಾದವ್ ಹರೀಶ್ ರವರು ಅಧ್ಯಕ್ಷರು ಸೌಮ್ಯ ಸ್ವಾಮಿ, ಉಪಾಧ್ಯಕ್ಷರಾದ ಸತ್ಯ, ಪಂಚಾಯಿತಿ ಬಿಲ್ ಕಲೆಕ್ಟ್ರಾದ ಮಧು, ಅಟೆಂಡರ್ ನಾಗೇಶ್, PGRSS ರಾಜ್ಯ ಸಂಚಾಲಕರಾದ ರಕ್ತದಾನಿ ಮಂಜು ಖಜಂಚಿ, ಮಂಜುಳಾ ಮೇಡಂ, ಕಾರ್ಯದರ್ಶಿಯಾದ ರವೀಂದ್ರ ಹರಿಣಿ, ಕಂಪ್ಯೂಟರ್ ಆಪರೇಟರ್ ಹಾಗೂ ಹಂದರಹಳ್ಳಿ ಗ್ರಾಮದ ಎಲ್ಲಾ ಹಿರಿಯ ನಾಗರಿಕರು ಮಹಿಳೆಯರು ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು. 150ಕ್ಕೂ ಹೆಚ್ಚು ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡುರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.




