Breaking
23 Mar 2026, Mon

ಸಿದ್ದಕಟ್ಟೆ ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ: ಅಧ್ಯಕ್ಷರಾಗಿ ಕಿರಣ್ ಕುಮಾರ್ ಮಂಜಿಲ, ಉಪಾಧಕ್ಷರಾಗಿ ಸತೀಶ್ ಪೂಜಾರಿ ಹಾಗೂ ನಿತ್ಯಾನಂದ ಪೂಜಾರಿ ಆಯ್ಕೆ

ಬಂಟ್ವಾಳ: ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ರಿ. ನಾರಾಯಣ ಗಿರಿ ಸಿದ್ದಕಟ್ಟೆ ಇದರ ವಿಶೇಷ ಕಾರ್ಯಕಾರಿ ಸಮಿತಿ ಸಭೆ ಇಂದು ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷರಾಗಿ ಉದ್ಯಮಿ, ಸಮಾಜ ಸೇವಕ ಕಿರಣ್ ಕುಮಾರ್ ಮಂಜಿಲ ಆಯ್ಕೆಯಾಗಿದರು.

ಉಪಾಧ್ಯಕ್ಷರಾಗಿ ಸತೀಶ್ ಪೂಜಾರಿ ಅಲಕ್ಕೆ ಹಾಗೂ ನಿತ್ಯಾನಂದ ಪೂಜಾರಿ ಕೆಂತಲೆ, ಕೋಶಾಧಿಕಾರಿಯಾಗಿ ಯೋಗೀಶ್ ಪೂಜಾರಿ ಕೆರ್ನಡೆ, ಪ್ರಧಾನ ಕಾರ್ಯದರ್ಶಿ ರತ್ನಾಕರ ಮದಂಗೋಡಿ, ಲೆಕ್ಕ ಪರಿಶೋಧಕರಾಗಿ ಸಂತೋಷ್ ಪೂಜಾರಿ, ಜತೆ ಕಾರ್ಯದರ್ಶಿಯಾಗಿ ರಮೇಶ್ ಪೂಜಾರಿ ಮಜಲು ಅವಿರೋಧವಾಗಿ ಆಯ್ಕೆಯಾದರು.

ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ರಿ. ಸಿದ್ದಕಟ್ಟೆ

ಈ ಸಂದರ್ಭದಲ್ಲಿ ಮಾಜಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಜಯಪ್ರಕಾಶ್ ಜೆ. ಎಸ್, ನಿಕಟಪೂರ್ವ ಅಧ್ಯಕ್ಷ ದಿನೇಶ್ ಸುಂದರ ಶಾಂತಿ ಹಾಗೂ ಪದಾಧಿಕಾರಿಗಳು, ಬಿಲ್ಲವ ಸಮಾಜದ ಗಣ್ಯರು, 5 ಗ್ರಾಮದ ಬಿಲ್ಲವ ಭಾಂಧವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *