Breaking
23 Mar 2026, Mon

ರಾಯಿ: ಆಟಿದ ಕೂಟ ಕಾರ್ಯಕ್ರಮದಲ್ಲಿ ಆಟಿ ಕಳೆಂಜನಾಗಿ ಕುಣಿದ ಮಕ್ಕಳು

ಬಂಟ್ವಾಳ: ತಾಲೂಕಿನ ರಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಆಟಿದ ಕೂಟ ಕಾರ್ಯಕ್ರಮಕ್ಕೆ ಲೊರೆಟ್ಟೊ ಅಗ್ರಾರ್ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಎವ್ಜಿನ್ ಲೋಬೊ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾನಾಡಿದ ಅವರು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ರಮೇಶ ನಾಯಕ್ ರಾಯಿ ಅವರು ತುಳುನಾಡಿನಲ್ಲಿ ಕೃಷಿಕರ ಆಟಿ ತಿಂಗಳ ಕಷ್ಟಕರ ಬದುಕಿನ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ಪ್ರಯತ್ನವಾಗಿ ಆಟಿದ ಕೂಟ ಕಾರ್ಯಕ್ರಮ ಎಲ್ಲೆಡೆ ಶಾಲಾ ಮಟ್ಟದಲ್ಲಿ ನಡೆಯುತ್ತಿದೆ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಚಂದ್ರಾವತಿ ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೊರೆಟ್ಟೊ ಅಗ್ರಾರ್ ಲಯನ್ಸ್ ಕ್ಲಬ್ ಅಧ್ಯಕ್ಷೆ ಫಿಲೋಮಿನಾ ರಾಡ್ರಿಗಸ್, ನಿವೃತ್ತ ಶಿಕ್ಷಕ ಸೋಮಪ್ಪ ಮಡಿವಾಳ, ಲೊರೆಟ್ಟೊಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯಾಧ್ಯಕ್ಷ ಕೆ. ಪರಮೇಶ್ವರ ಪೂಜಾರಿ ರಾಯಿ ಮತ್ತಿತರರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಲೋಕೇಶ್ ಕೈತ್ರೋಡಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪದ್ಮನಾಭ ಗೌಡ, ಮಾಜಿ ಅಧ್ಯಕ್ಷ ರಮೇಶ ಗೌಡ, ಹಳೆವಿದ್ಯಾಥರ್ಿ ಸಂಘದ ಅಧ್ಯಕ್ಷ ಶಮಿತ್ ಶಿವನಗರ, ನಮ್ಮ ಜವನೆರ್ ಟ್ರಸ್ಟ್ ಅಧ್ಯಕ್ಷ ಪ್ರದೀಪ್ ಗೌಡ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.

ಮುಖ್ಯಶಿಕ್ಷಕಿ ಜಾನೆಟ್ ಕಾನ್ಸೆಸೊ ಸ್ವಾಗತಿಸಿ, ಶಿಕ್ಷಕ ಸಿದ್ಧಪ್ಪ ಕಡೂರು ವಂದಿಸಿದರು. ಶಿಕ್ಷಕಿಯರಾದ ಬೇಬಿ ಅರಳ, ತನುಜಾ, ನಿಖಿತಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *