ವಿಟ್ಲ: ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಇದರ ನೂತನ ಸಮಿತಿಯ ಕಾರ್ಯಕಾರಿಣಿ ಸಭೆ ಮಂಗಳೂರು ಮೇರಿಹಿಲ್ ಗುರು ನಗರದ ಓಂ ಶ್ರೀ ಮಠದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಮಿತಿಯ ರಾಜ್ಯಾಧ್ಯಕ್ಷ ಓಂ ಶ್ರೀ ಮಠದ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಮಾತನಾಡಿ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ರಾಷ್ಟ್ರ ಮಟ್ಟದಲ್ಲಿ ಸ್ಥಾಪಿತವಾಗಿದೆ.
2022 ರೂಂನಲ್ಲಿ ಕರ್ನಾಟಕ ರಾಜ್ಯ ಸಮಿತಿ ಅಸ್ಥಿತ್ವಕ್ಕೆ ಬಂದಿದ್ದು, ತನ್ನ ಧ್ಯೇಯೋದ್ದೇಶಗಳೊಂದಿಗೆ ಕಾರ್ಯಪ್ರವೃತ್ತವಾಗಿದೆ. ರಾಜ್ಯದೆಲ್ಲೆಡೆ ಪ್ರಸ್ತುತ ಸನ್ನಿವೇಶದಲ್ಲಿ ಹಿಂದೂ ಧರ್ಮೀಯರ ಮೇಲೆ ಅನ್ಯಮತೀಯ ಶಕ್ತಿಗಳ ಕ್ರೌರ್ಯ, ಶೋಷಣೆ, ದಬ್ಬಾಳಿಕೆ ಮಿತಿಮೀರಿ ಹೋಗಿದ್ದು ಸಂತ ಸಮಿತಿಗೆ ಮೌನ ವಹಿಸಿ ಕುಳಿತು ಕೊಳ್ಳಲು ಅಸಾಧ್ಯವಾಗಿದೆ. ಎಲ್ಲಿ ನೋಡಿದರಲ್ಲಿ ಹಿಂದೂ ಹೆಣ್ಮಕ್ಕಳ ಮೇಲೆ ಅತ್ಯಾಚಾರ, ಮತಾಂತರ, ಲವ್ ಜಿಹಾದ್ ನಂತಹ ದುಷ್ಕೃತ್ಯಗಳು ಎಗ್ಗಿಲ್ಲದೇ ನಡೆಯುತ್ತಿವೆ. ನಾಗಮಂಗಲದಲ್ಲಿ ಮೊನ್ನೆ ಮೊನ್ನೆ ಗಣೇಶ ವಿಸರ್ಜನೆ ವೇಳೆ ನಡೆದಿರ ತಕ್ಕಂತಹ ಪ್ರಕರಣ ರಾಜ್ಯ ಸರ್ಕಾರದ ಅಸ್ಥಿತ್ವವನ್ನೇ ಪ್ರಶ್ನಿಸುವಂತಾಗಿದೆ. ಹಿಂದೂ ಧರ್ಮೀಯರನ್ನು ಅಧೀರರನ್ನಾಗಿಸುವಂತಿದೆ. ಇಂತಹ ದುಷ್ಕೃತ್ಯಗಳನ್ನು ಸಮಿತಿ ಖಂಡಿಸುತ್ತದೆ. ಈ ಘಟನೆಯ ಬಗ್ಗೆ ಪ್ರಧಾನಿ, ಕೇಂದ್ರದ ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ. ರಾಜ್ಯ ಗೃಹ ಸಚಿವರನ್ನು ಭೇಟಿ ಮಾಡಿ ಸಮಿತಿ ಮನದಟ್ಟು ಮಾಡಲಿದೆ. ಹಿಂದೂ ಧರ್ಮಕ್ಕೆ ಚ್ಯುತಿ ಬಂದಾಗ ಯಾವುದೇ ಸನ್ನಿವೇಶ ಬಂದರೂ ಎದುರಿಸಲು ಸಿದ್ಧ ಎಂದು ತಿಳಿಸಿದರು.
ಧರ್ಮ ಕುಕ್ಕೆ ಕಪ್ಪು ಚುಕ್ಕೆ ತರುವ ಸರ್ವಧರ್ಮೀಯರನ್ನೂ, ಸಂತರುಗಳನ್ನೂ ಸಮಿತಿ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಡಗು ಅರಸಿ ಕುಪ್ಪೆ ಶ್ರೀ ಮಂಜುನಾಥ ಕ್ಷೇತ್ರದ ಶ್ರೀ ರಾಜೇಶ್ ನಾಥ್ ಗುರೂಜಿ ಮಾತನಾಡಿ ಸಂತರು ಗಳು ಯೋಗಿಗಳು ಆಗಿರಬೇಕು, ಅನಿವಾರ್ಯ ಸಂದರ್ಭಗಳಲ್ಲಿ ಯೋಧರಂತೆಯೂ ಇರಬೇಕಾಗುತ್ತದೆ. ಹಿಂದೂ ರಾಷ್ಟ್ರದಲ್ಲಿ ಗುಲಾಮಗಿರಿಯಲ್ಲಿ ಬದುಕಲು ಸಾಧ್ಯವಿಲ್ಲ ಎಂದರು.
ಸಮಿತಿ ಕೋಶಾಧಿಕಾರಿ ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಸಮಿತಿ ಮುಂದಿನ ದಿನಗಳಲ್ಲಿ ಪ್ರತಿ ಹಿಂದೂ ಮನೆ ಮನೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಹಾಕಿಕೊಳ್ಳಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳು ಪ್ರತಿಜ್ಞಾ ವಿಧಿ ಕೈಗೊಂಡರು.
ಸಮಿತಿ ರಾಜ್ಯ ವ್ಯಾಪ್ತಿಯಲ್ಲಿ ವಿಸ್ತರಣೆಯಾಗುವ ಬಗ್ಗೆ, ಜವಾಬ್ದಾರಿಗಳ ಹಂಚಿಕೆ ಕುರಿತು ಚರ್ಚಿಸಲಾಯಿತು. ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಸಮಿತಿ ಉಪಾಧ್ಯಕ್ಷರಾದ ಬಳ್ಳಾರಿ ಕಲ್ಯಾಣ ಸ್ವಾಮಿ ಸಂಸ್ಥಾನ ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಅರಸೀಕೆರೆ ರುದ್ರಾಕ್ಷ ಫೌಂಡೇಶನ್ ನ ಜಯಪ್ರಕಾಶ್ ಗುರೂಜಿ, ಕಾರ್ಯದರ್ಶಿಗಳಾದ ದೊಡ್ಡಬಳ್ಳಾಪುರ ಜಗದ್ಗುರು ಬಸವೇಶ್ವರ ಮಹಾಮಂಡಳದ ನಿರಂಜನ ದೇಶಿ ಕೇಂದ್ರ ಸ್ವಾಮೀಜಿ, ರಾಯಚೂರು ಅಮರೇಶ್ವರ ಮಠದ ಶ್ರೀ ಗಿರಿ ಮಲ್ಲೇಶ್ವರ ಸ್ವಾಮೀಜಿ, ವಿಜಯಪುರ ಭೂ ಕೈಲಾಸ ಮೇಲು ಗದ್ದುಗೆ ಹೀರೆಮಠ ಸಂಸ್ಥಾನದ ಶ್ರೀ ಷಟಸ್ಥಳ ಬ್ರಹ್ಮ ಡಾ.ಗುರು ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಮೈಸೂರು ರಾವಂದೂರು ಶ್ರೀ ಬಸವ ಕೇಂದ್ರ ಶ್ರೀ ವಿರಕ್ತ ಮಠದ ಮೋಕ್ಷ ಪತಿ ಸ್ವಾಮೀಜಿ, ಶ್ರೀ ಮಹಾಂತ ಸ್ವಾಮೀಜಿ ಸವದತ್ತಿ, ಸಂಗಮೇಶ ಸ್ವಾಮೀಜಿ ಕಾರವಾರ, ದ.ಕ ಆರ್ ಎಸ್ಎಸ್ ಪ್ರಾಂತ ಸಂಘ ಚಾಲಕ್ ಡಾ.ವಾಮನ್ ಶೆಣೈ, ಕೊಡಗು ಬಜರಂಗದಳ ಕಾರ್ಯದರ್ಶಿ ಸೋಮೇಶ್, ವಿ ಹೆಚ್ ಪಿ ವಿಜಯ ಕಿರಣ್ ಉಪಸ್ಥಿತರಿದ್ದರು.
ಓಂ ಶ್ರೀ ಮಠದ ಮಾತಾಶ್ರೀ ಶಿವಜ್ಞಾನಮಹೀ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.