ಕಲ್ಲಡ್ಕ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ವತಿಯಿಂದ ವಿಟ್ಲ ಸರ್ಕಾರಿ ಬಸ್ ಸಮಸ್ಯೆ ಹಾಗೂ ಇನ್ನಿತರ ಬಸ್ ಸಮಸ್ಯೆ ಖಂಡಿಸಿ ಕಲ್ಲಡ್ಕದಲ್ಲಿ ಇಂದು ಪ್ರತಿಭಟನೆ ನಡೆಯಿತು.
ಮಂಗಳೂರು-ವಿಟ್ಲ ಕಡೆ ಪ್ರಯಾಣಿಸುವ ಸರ್ಕಾರಿ ಬಸ್ ವ್ಯವಸ್ಥೆಯು ಗೊಂದಲಮಯ ವಾಗಿದ್ದು,ಸರಿಯಾದ ಸಮಯಕ್ಕೆ ಬಾರದೆ ಮತ್ತು ಬಸ್ ಸಂಖ್ಯೆಯು ಕಡಿಮೆ ಆಗುತ್ತಿರುವುದು ಇದೆಲ್ಲಾವೂ ಕೂಡ ವಿದ್ಯಾರ್ಥಿಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ.ಈ ಹಿಂದೆಯೂ ಕೂಡ ಹಲವು ಬಾರಿ ಮನವಿ ನೀಡಿದ್ದರು ಕೂಡ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಇಂದು ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರು ಸಿಡಿದೆದ್ದರು .
ಶ್ರೀ ರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರ ಕಾಲೇಜು ವಿದ್ಯಾರ್ಥಿಗಳು, ಎಬಿವಿಪಿಯ ಪ್ರಮುಖರ ಉಪಸ್ಥಿತಿ ಯೊಂದಿಗೆ ಸಂಜೆ ಪ್ರತಿಭಟನೆ ನಡೆಸಲಾಯಿತು.





.ಪ್ರತಿಭಟನೆಯು ನಡೆಯುತ್ತಿರುವ ಸ್ಥಳಕ್ಕೆ ಅಧಿಕಾರಿಗಳು ಬಾರದೆ ಕೆಳ ದರ್ಜೆಯ ಅಧಿಕಾರಿಯನ್ನು ಕಳುಹಿಸಿ ವಿದ್ಯಾರ್ಥಿ ಕಾರ್ಯಕರ್ತರನ್ನು ಮನವೊಲಿಸಲು ಮುಂದಾದರು ಕಾರ್ಯಕರ್ತರು ಅವರ ಮಾತನ್ನು ತಿರಸ್ಕರಿಸಿ ಪ್ರತಿಭಟನೆಯ ಮತ್ತೊಂದು ಸ್ವರೂಪದ ಮೂಲಕ ಬಸ್ ತಡೆಯಲು ಮುಂದಾದರು ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಕಾರ್ಯಕರ್ತರನ್ನು ಮನವೊಲಿಸಿದರು, ತದನಂತರದಲ್ಲಿ ಈ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಈ ಹೋರಾಟವನ್ನು ಕೈ ಬಿಡಲು ತಿಳಿಸಿದರು ಆದರೂ ಕೂಡ ಎಬಿವಿಪಿ ಕಾರ್ಯಕರ್ತರು ಒಂದು ವಾರದ ಗಡುವು ನೀಡಿದ್ದು ಸಮಸ್ಯೆಗಳು ಪರಿಹಾರವಾಗದಿದ್ದಲ್ಲಿ ಕಲ್ಲಡ್ಕ ಪರಿಸರದಲ್ಲಿ ಸರ್ಕಾರಿ ಬಸ್ ತಡೆದು ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ವಿಭಾಗ ಸಂಚಾಲಕ್ ಸುವಿತ್ ಶೆಟ್ಟಿ, ಜಿಲ್ಲಾ ಸಂಚಾಲಕ್ ಶ್ರೀಜಿತ್ ರೈ, ಜಿಲ್ಲಾ ಸಹ ಸಂಚಾಲಕ್ ಪ್ರತೀಕ್ ಬಂಟ್ವಾಳ, ತಾಲೂಕು ಸಹ ಸಂಚಾಲಕಿ ಧನುಶ್ರೀ, ಮತ್ತು ವಿಭಾಗ ಕಲಾ ಮಂಚ್ ಸಮೀಕ್ಷಾ, ಪ್ರಿಯಾಂಕಾ,ತ್ರೀಷಾ,ಮೋನಿಷ್ ಗೌತಮ್,ಹರ್ಷಿತ್ ಹಾಗೂ ಇನ್ನಿತರ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.



