Breaking
20 Sep 2026, Sun

ಕಾಸರಗೋಡು: ಗುಡ್ಡ ಕುಸಿತ- ಮನೆ ಭಾಗಶಃ ಹಾನಿ

ಕಾಸರಗೋಡು: ಮನೆಯ ಪಾರ್ಶ್ವದ ಗುಡ್ಡ ಕುಸಿದು ಮನೆ ಭಾಗಶಃ ಹಾನಿಗೊಂಡ ಘಟನೆ ಚಂದ್ರಗಿರಿ ಸಮೀಪ ಸಂಭವಿಸಿದೆ.

ಚಂದ್ರಗಿರಿ ನಡಕ್ಕಾಲ್ ನ ಮಿತೇಶ್ ಎಂಬವರ ಮನೆ ಸಮೀಪದ ಗುಡ್ಡ ಜುಲೈ 17ರಂದು ರಾತ್ರಿಯ ಭೀಕರ ಮಳೆಗೆ ಕುಸಿದಿದ್ದು ಬೃಹತ್ ಕಲ್ಲು ಸಹಿತ ಮಣ್ಣು ಮನೆಯ ಒಂದು ಪಾರ್ಶ್ವದ ಮೇಲೆ ಕುಸಿದು ಅವಘಡಕ್ಕೆ ಕಾರಣವಾಗಿದೆ.

ಅವಘಡದಿಂದ ಮನೆಯ ಒಂದು ಕೊಠಡಿ ಸಂಪೂರ್ಣ ಹಾನಿಗೊಳಗಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *