ಬಂಟ್ವಾಳ: ಅಮ್ಟಾಡಿಯಲ್ಲಿ ಗುಡ್ಡ ಕುಸಿತ! ಮನೆಗೆ ಭಾರೀ ಹಾನಿ

‌ಬಂಟ್ವಾಳ: ಗುಡ್ಡ ಕುಸಿದು ಮನೆಯೊಂದಕ್ಕೆ ಭಾರೀ ಹಾನಿಯಾದ ಘಟನೆ ಅಮ್ಟಾಡಿ ಗ್ರಾಮದ ತಲೆಂಬಿಲ ಎಂಬಲ್ಲಿ ಸಂಭವಿಸಿದೆ.

ಇಂದು ಮುಂಜಾನೆ ಸುಮಾರು 4 ಗಂಟೆಗೆ ಮಂಜಲ್‌ ಹೌಸ್‌, ಜೊಸ್ಸಿ ಮೆಲ್ವಿನ್‌ ವೇಗಸ್‌ ಅವರ ಮನೆಯ ಸಮೀಪದ ಗುಡ್ಡಕುಸಿದಿದ್ದು ಅದೃಷ್ಟವಶಾತ್‌ ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ. ಮನೆಯ 2 ಕೋಣೆಗಳನ್ನು ಮಣ್ಣು ಸಂಪೂರ್ಣವಾಗಿ ಆವರಿಸಿಕೊಂಡಿದ್ದು ಮನೆಯ ಪೀಠೋಪಕಣ, ಚಿನ್ನ, ಹಣ ಸೇರಿದಂತೆ ಸುಮಾರು 50 ಲಕ್ಷದಷ್ಟು ಬೆಲೆ ಬಾಳುವ ವಸ್ತುಗಳು ಮಣ್ಣುಪಾಲಾಗಿದೆ.

8 ವರ್ಷಗಳ ಹಿಂದೆಯಷ್ಟೇ ನಿರ್ಮಾಣ ಮಾಡಿರುವ ಮನೆ ಶೇ. 90ರಷ್ಟು ಹಾನಿಗೀಡಾಗಿದ್ದು ಸದ್ಯ ಈ ಮನೆಮಂದಿ ಬೇರೊಂದು ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಮನೆಯಲ್ಲಿದ್ದ ವಸ್ತುಗಳನ್ನು ಸಂತ್ರಸ್ತರ ಸಹೋದರನ ಮನೆಗೆ ಶಿಫ್ಟ್ ಮಾಡಲಾಗಿದೆ.

ಘಟನೆಯ ಬಗ್ಗೆ ವಿಚಾರ ತಿಳಿದು ನೆರೆ ಹೊರೆಯವರು ಇವರ ಸಹಾಯಕ್ಕೆ ಬಂದಿದ್ದು ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *