ಕಾಸರಗೋಡು: ಜಿಲ್ಲೆಯಲ್ಲಿ ಮುಳ್ಳೇರಿಯ ಆದೂರು ರಸ್ತೆಯ ಅಲಂತಡ್ಕದಲ್ಲಿ ಭಾರೀ ಗಾತ್ರದ ಮರವೊಂದು ಚಲಿಸುತ್ತಿದ್ದ ಅಟೋ ರಿಕ್ಷಾದ ಮೇಲೆ ಬಿದ್ದು ಓರ್ವ ಗಾಯಗೊಂಡ ಘಟನೆ ಇಂದು ( ಜು.17) ಬೆಳಿಗ್ಗೆ ನಡೆದಿದೆ.
ಆಟೋರಿಕ್ಷಾ ಸಂಪೂರ್ಣವಾಗಿ ನಜ್ಜು ಗುಜ್ಜಾಗಿದೆ.

ಆದೂರು ಸಿ. ಎ ನಗರದ ಅಬ್ದುಲ್ ಕುಂಞಿ ಗಾಯಗೊಂಡವರು ಎಂದು ತಿಳಿದುಬಂದಿದೆ.
ಮುಳ್ಳೇರಿಯಾ ದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ . ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮರವನ್ನು ಕಡಿದು ತೆರವುಗೊಳಿಸಿದರು.





