ಬೆಳ್ತಂಗಡಿ: ಆನೆಯು ಸೊಂಡಿಲಿನಿಂದ ವ್ಯಕ್ತಿಯೋರ್ವನಿಗೆ ಬಡಿದು, ತಿವಿದು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಸೌತಡ್ಕ ಗುಂಡಿ ಎಂಬಲ್ಲಿ ಇಂದು (ಜು.17 )ನಡೆದಿದೆ.

ಮೃತಪಟ್ಟವರು ಸೌತಡ್ಕ ನಿವಾಸಿ ಬಾಲಕೃಷ್ಣ ಶೆಟ್ಟಿ ಎಂದು ತಿಳಿದುಬಂದಿದೆ.
ಗೇರು ಪ್ಲಾಂಟೇಶನ್ ನಲ್ಲಿ ಬೆಳ್ಳಂಬೆಳ್ಳಗೆ 2 ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಅದನ್ನು ಓಡಿಸುವ ಸಂದರ್ಭ ಆನೆ ತಿರುಗಿ ಬಂದು ಬಾಲಕೃಷ್ಣ ಶೆಟ್ಟಿ ಎಂಬವರಿಗೆ ತಿವಿದು, ಗಂಭೀರ ಗಾಯಗೊಳಿಸಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಧಾವಿಸಿ ತನಿಖೆಯನ್ನು ನಡೆಸಿದ್ದಾರೆ.




