Breaking
19 Sep 2026, Sat

ಬೆಳ್ತಂಗಡಿಯಲ್ಲಿ ಓಮ್ನಿ ಕಾರಿಗೆ ಬೆಂಕಿ: ಭಾಗಶಃ ಧ್ವಂಸ

ಬೆಳ್ತಂಗಡಿ: ತಾಲೂಕಿನ ಬಾರ್ಯ ಗ್ರಾಮದ ಮಜಿಕುಡೆ ಎಂಬಲ್ಲಿ ಶೆಡ್‌ನಲ್ಲಿ ನಿಲ್ಲಿಸಲಾಗಿದ್ದ ಓಮ್ನಿ ಕಾರಿಗೆ ಬೆಂಕಿ ಹತ್ತಿಕೊಂಡು ಉರಿದ ಘಟನೆ ಜುಲೈ 16 ರಂದು ನಡೆದಿದೆ.

ಓಮ್ನಿ ಕಾರು ಮಜಿಕುಡೆ ನಿವಾಸಿ ವಿಶ್ವನಾಥ ಗೌಡ ಅವರಿಗೆ ಸೇರಿದ್ದು ಎನ್ನಲಾಗಿದೆ. ಬೆಳಿಗ್ಗೆ ಸುಟ್ಟ ವಾಸನೆ ಬಂದ ಹಿನ್ನೆಲೆಯಲ್ಲಿ ಬಾಗಿಲು ತೆರೆದು ನೋಡಿದಾಗ ಕಾರು ಬೆಂಕಿ ಹತ್ತಿಕೊಂಡು ಉರಿಯುತ್ತಿರುವುದು ಕಂಡು ಬಂತು ತಕ್ಷಣವೇ ನೀರು ಹಾಕಿ ಬೆಂಕಿ ನಂದಿಸಿದರೂ ಕಾರು ಭಾಗಶಃ ಸುಟ್ಟು ಹೋಗಿದೆ.

ಈ ಕುರಿತು ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *