ಪುತ್ತೂರಿನ : ಪುತ್ತೂರಿನ ಲವ್, ಸೆಕ್ಸ್ , ಧೋಖಾ ಪ್ರಕರಣದಲ್ಲಿ ಯುವತಿ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಲು ಕಾರಣ ಆಗಿದ್ದಾನೆ ಎಂದು ಆರೋಪಿಸಲಾಗಿರುವ ಯುವಕ ಶ್ರೀಕೃಷ್ಣನಿಗೆ ಮಾಫಿಯಾ ಡಾನ್ ವೊಬ್ಬರಿಂದ ಜೀವಬೆದರಿಕೆ ಬಂದಿದೆ ಅಂತ ಹೇಳಲಾಗುತ್ತಿದೆ.
ಈ ಕುರಿತ ಆಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರಕರಣ ಬೇರೆಯದೇ ರೀತಿಯ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ ಅನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ನಾನು ಮಾಫಿಯಾ ಡಾನ್ ಕಲಿ ಯೋಗೀಶ್ ಅನ್ನುವ ಹೆಸರು ಹೇಳಿ ಪುತ್ತೂರಿನ ಸಂಪೂರ್ಣ ಘಟನೆಯನ್ನು ಉಲ್ಲೇಖಿಸಿರುವ ವ್ಯಕ್ತಿಯೊಬ್ಬ ಶ್ರೀಕೃಷ್ಣ ರಾವ್ ಯುವತಿಗೆ ವಂಚನೆ ಮಾಡಿದ್ದು, ಆಕೆ ಈಗ ಮಗುವಿಗೆ ಜನ್ಮ ನೀಡುವಂತಾಗಿದೆ.
ಎಲ್ಲಾ ಸಂಘಟನೆ, ಪಕ್ಷ, ಶಾಸಕರು ಆತನನ್ನು ಯುವತಿಯ ಜೊತೆಗೆ ಮದುವೆ ಮಾಡಿಸಬೇಕು. ಹುಟ್ಟಿದ ಮಗುವಿಗೆ ತಂದೆ ಯಾರು ಎಂದು ತಿಳಿದಿರಬೇಕು. ಆತ ಮದುವೆಯಾಗಲು ನಿರಾಕರಿಸಿದಲ್ಲಿ ಗುಂಡು ಹೊಡೆದು ಸಾಯಿಸುತ್ತೇವೆ. ಮಗುವಿಗೆ ಅಪ್ಪ ಬೇಕು. ಅವ ಬದುಕು ಇರಬೇಕಾದರೆ ಆತ ಯುವತಿಯ ಜೊತೆ ಮದುವೆಯಾಗಬೇಕು. ಇಲ್ಲದೇ ಹೋದಲ್ಲಿ ಅವರು ಬದುಕಿರುವುದೇ ಬೇಡ. ಆತ ಸತ್ತರೆ ಮಗುವಿಗೆ ಹೇಳಬಹುದು ಅಪ್ಪ ಸತ್ತಿದ್ದಾನೆಂದು ಹೇಳಬಹುದು ಎಂದು ಶ್ರೀಕೃಷ್ಣ ನ ವಿರುದ್ಧ ಜೀವಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನೂ ಲಭ್ಯವಾಗಿರುವ ಈ ಆಡಿಯೋ ಕಾಲ್ ಬಗ್ಗೆ ಪೊಲೀಸರು ಇನ್ನಷ್ಟೇ ಸ್ಪಷ್ಣನೆ ನೀಡಬೇಕಿದೆ.

ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಪುತ್ರ ಶ್ರೀಕೃಷ್ಣ ರಾವ್ ಎಂಬಾತನಿಂದ ಯುವತಿಗೆ ವಂಚನೆ ನಡೆದಿದೆ ಅಂತ ಹೇಳಲಾಗುತ್ತಿದ್ದು, ರಾಜಕೀಯ ಪಡಸಾಲೆಯಲ್ಲಿ, ವಿವಿಧ ಸಂಘಟನೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಬಹಳ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.

ಜೈಲಿನಲ್ಲಿ ಇರುವ ಆರೋಪಿ ಶ್ರೀಕೃಷ್ಣ ರಾವ್ ತಾನು ಜೈಲಿನಲ್ಲಿ ಬೇಕಾದ್ರೆ ಇರುತ್ತೇನೆ. ಆದ್ರೆ ಆಕೆಯನ್ನು ಮದುವೆಯಾಗುವುದಿಲ್ಲ ಹೇಳಿದ್ದಾನೆ ಎಂದು ಸಂತ್ರಸ್ತೆ ಯುವತಿಯ ತಾಯಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.


