ಸುಳ್ಯ: ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಶಾಕ್ ಗೆ ಒಳಗಾದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಸುಳ್ಯದ ಕೊಡಿಯಾಲ ಗ್ರಾಮದ ಕಲ್ಲಪಣೆಯಲ್ಲಿ ಜು.9 ರಂದು ನಡೆದಿದೆ.

ಕಲ್ಲಪಣೆಯ ನಿವಾಸಿಯಾಗಿರುವ ದಿವಾಕರ ಆಚಾರ್ಯ(45) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಇವರು ದಾರಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೇ ತುಳಿದ್ದರಿಂದ ದುರಂತ ಅಂತ್ಯ ಕಂಡಿದ್ದಾರೆ.




