ಸುಳ್ಯದಲ್ಲಿ ವಿಪರೀತ ಜ್ವರಕ್ಕೆ ಯುವತಿ ಬಲಿ

ಸುಳ್ಯ: ವಿಪರೀತ ಜ್ವರದಿಂದ ಯುವತಿಯೋರ್ವರು ಮೃತಪಟ್ಟ ಘಟನೆ ಸುಳ್ಯದ ಮಂಡೆಕೋಲು ಎಂಬಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆ ಮಂಡೆಕೋಲು ನಿವಾಸಿ ಸುರೇಶ್ ಕಾಮತ್ ಎಂಬವರ ಪತ್ನಿ ಸುಭಾಷಿಣಿ ಎಂದು ಗುರುತಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಸಹ ಚಿಕಿತ್ಸೆ ಸ್ಪಂದಿಸದೆ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ತಾಯಿ, ಸಹೋದರ, ಸಹೋದರಿ, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *