Breaking
19 Sep 2026, Sat

ಉಪ್ಪಿನಂಗಡಿ: ಕೃಷಿ ತೋಟಕ್ಕೆ ಒಂಟಿ ಸಲಗ ದಾಳಿ

ಉಪ್ಪಿನಂಗಡಿ : ಕೃಷಿ ತೋಟಕ್ಕೆ ಕಾಡಾನೆ ದಾಳಿ ನಡೆಸಿ ಅಪಾರ ಹಾನಿಯುಂಟು ಮಾಡಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಕೌಕ್ರಾಡಿ ಗ್ರಾಮದ ಮಂಡೆಗುಂಡಿ ನಿವಾಸಿ ಬಾಲಮುರಳಿಕೃಷ್ಣ ಅವರ ಕೃಷಿ ತೋಟಕ್ಕೆ ಒಂಟಿ ಸಲಗ ದಾಳಿ ನಡೆಸಿ ಬಾಳೆಗಿಡ, ನೀರಿನ ಪೈಪ್ ಲೈನ್‌ಗಳಿಗೆ ಹಾನಿಗೊಳಿಸಿದೆ ಎಂದು ತಿಳಿದುಬಂದಿದೆ.

ಪರಿಸರದ ನಾರಾಯಣ ಬೇರಿಕೆ, ಮಹೇಶ್ ಭಟ್ ಕಂಚಿನಡ್ಕ, ರಾಮ ಎಡಪಡಿತ್ತಾಯ ಮುಂತಾದವರ ಕೃಷಿಕರ ತೋಟಗಳಿಗೂ ಆನೆ ದಾಳಿ ನಡೆಸಿ ಹಾನಿಗೊಳಿಸಿದೆ.

ಕಳೆದ ಒಂದು ತಿಂಗಳಿಂದ ಕೌಕ್ರಾಡಿ ಗ್ರಾಮದ ಮಂಡೆಗುಂಡಿ, ಬೇರಿಕೆ, ಕಂಚಿನಡ್ಕ, ಪಿಲತ್ತಿಂಜ ಭಾಗದಲ್ಲಿ ರಾತ್ರಿ ವೇಳೆ ಆನೆಗಳ ದಾಳಿ ಸಾಮಾನ್ಯವಾಗಿದೆ. ಇದರಿಂದ ಕೃಷಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

Leave a Reply

Your email address will not be published. Required fields are marked *