Breaking
15 Jul 2026, Wed

ಮಂಗಳೂರು: ಹೃದಯಾಘಾತದಿಂದ 18 ವರ್ಷದ ಯುವಕ ಸಾವು

ಮಂಗಳೂರು: ಹೃದಯಾಘಾತದಿಂದ ವಿದ್ಯಾರ್ಥಿಯೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಸುರತ್ಕಲ್‌ನ ಕೃಷ್ಣಾಪುರ ಹಿಲ್‌ಸೈಡ್ ಬಳಿ ಜು. 07ರಂದು ನಡೆದಿದೆ.

ಹಿಲ್‌ಸೈಡ್ ನಿವಾಸಿ ಅಸ್ಗರ್ ಅಲಿ ಅವರ ಪುತ್ರ ಅಫ್ತಾಬ್ (18) ಮೃತ ದುರ್ದೈವಿ.

ಅಸ್ಗರ್ ಅಲಿ ಅವರ ನಾಲ್ಕು ಮಕ್ಕಳಲ್ಲಿ ಏಕೈಕ ಪುತ್ರ ಅಫ್ತಾಬ್. ಇವರು ಸುರತ್ಕಲ್‌ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಇವರ ತಾಯಿ ಕೋವಿಡ್ ಸಮಯದಲ್ಲಿ ನಿಧನರಾಗಿದ್ದರು. ಅಂದಿನಿಂದ ತಂದೆ ಮತ್ತು ಮಗ ಮಾತ್ರ ಒಟ್ಟಿಗೆ ವಾಸಿಸುತ್ತಿದ್ದರು. ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಫ್ತಾಬ್ ಮನೆಯಲ್ಲಿ ಸ್ನಾನಕ್ಕೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *