ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಭವನದಲ್ಲಿ ಚಿತ್ರಕಲಾ ತರಬೇತಿಗೆ ಚಾಲನೆ

ಬಂಟ್ವಾಳ : ಯಾವುದೇ ಕಲಿಕೆಗೆ ವಯಸ್ಸಿನ ಅಡ್ಡಿ ಇಲ್ಲ. ಯಾವುದೇ ವಯಸ್ಸಿನವರು ಯಾವುದೇ ತರಬೇತಿಯನ್ನು ಯಾವಾಗ ಬೇಕಾದರು ಪಡೆಯಬಹುದು. ಚಿತ್ರಕಲೆಯೂ ಅಷ್ಟೇ, ಯಾವುದೇ ವಯಸ್ಸಿನವರು ತಮ್ಮ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಚಿತ್ರದ ಮುಖೇನ ವ್ಯಕ್ತಪಡಿಸಬಹುದು. ಹೆಚ್ಚು ಸಮಯ ಚಿತ್ರಕಲೆಯಲ್ಲಿ ತಲ್ಲೀನರಾದರೆ ಅದರಿಂದ ಮೂಡಿ ಬರಲಿರುವ ಚಿತ್ರವೂ ಅದ್ಭುತವಾಗಿರುತ್ತದೆ ಎಂದು ನಿವೃತ್ತ ಚಿತ್ರಕಲಾ ಶಿಕ್ಷಕ ಚೆನ್ನಕೇಶವ ಡಿ.ಆರ್. ತಿಳಿಸಿದರು.

ಅವರು ಜು.06ರಂದು ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ರಿ. ಪೊಸಳ್ಳಿ ಇದರ ಆಶ್ರಯದಲ್ಲಿ ನಡೆದ ಕುಲಾಲ ಸೇವಾದಳದ ವತಿಯಿಂದ ನಡೆದ ʼಚೈತನ್ಯ ೪.೦ ನಿರಂತರ ಶಿಕ್ಷಣದಲ್ಲಿ ಚಿತ್ರಕಲೆ ತರಬೇತಿʼಗೆ ಚಾಲನೆ ನೀಡಿ ಮಾತನಾಡಿದರು.

ದಳಪತಿ ಜಯಂತ ಕುಲಾಲ್ ಅಗ್ರಬೈಲು ಮಾತನಾಡಿ ಕಳೆದ ಮೂರು ವರ್ಷಗಳಿಂದ ಕುಲಾಲ ಸೇವಾದಳದಿಂದ ಬಂಟ್ವಾಳದ ಕುಲಾಲ ಭವನದಲ್ಲಿ ಮಹೇಶ್ ಕುಲಾಲ್ ಕಡೇಶಿವಾಲಯ ಇವರಿಂದ ಡ್ಯಾನ್ಸ್, ಯೋಗ ಶಿಕ್ಷಕ ಕಿಶೋರ್ ಕೈಕುಂಜೆ ಇವರಿಂದ ಯೋಗ ತರಬೇತಿ, ಸೌಮ್ಯ ಸುಧಾಕರ್ ಇವರಿಂದ ಭಜನೆ ತರಬೇತಿಯನ್ನು ಉಚಿತವಾಗಿ ನೀಡುತ್ತಾ ಬಂದಿದ್ದು ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿ ತಿಳಿಸಿದರು.

ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಕಾರ್ಯಕಾರಿ ಸಮಿತಿ ಸದಸ್ಯರಾದ ಗಣೇಶ್ ಕುಲಾಲ್ ಬೆದ್ರಗುಡ್ಡೆ, ದೇವದಾಸ ಅಗ್ರಬೈಲು, ತಾರನಾಥ ಮೊಡಂಕಾಪು, ರಾಘವೇಂದ್ರ ಕಾಮಾಜೆ, ಪ್ರೇಮನಾಥ ನೇರಂಬೋಳು ಸೇವಾದಳದ ಕಾರ್ಯದರ್ಶಿ ರಾಜೇಶ್ ಭಂಡಾರಿಬೆಟ್ಟು, ಸೇವಾದಳದ ಸದಸ್ಯರುಗಳಾದ ಪುರುಷೋತ್ತಮ ಸೌತೆಬಳ್ಳಿ, ಕಿಶೋರ್ ಕೈಕುಂಜೆ, ಚಿರಾಗ್ ಕಾಮಾಜೆ, ಬಿಪಿನ್ ಕರಿಂಗಾಣ, ಶೇಖರ ಮಣಿಹಳ್ಳ ಸಹಕರಿಸಿದರು.

Leave a Reply

Your email address will not be published. Required fields are marked *