ಜು.06 ಷಣ್ಮುಖ ಕಲಾತಂಡ ಬದನಡಿ ಕೊಯಿಲ ಬಂಟ್ವಾಳ ಆಶ್ರಯದಲ್ಲಿ “ಊರುದ ಗೌಜಿ ಗೊಬ್ಬುದ ಕಲ ಬಾರ್ನೆದ ತಲ” ಕಾಯ೯ಕ್ರಮ

ಬಂಟ್ವಾಳ: ಷಣ್ಮುಖ ಕಲಾತಂಡ ಬದನಡಿ ಕೊಯಿಲ ಬಂಟ್ವಾಳ ಇದರ ಆಶ್ರಯದಲ್ಲಿ ‘ಊರುದ ಗೌಜಿ ಗೊಬ್ಬುದ ಕಲ ಬಾರ್ನೆದ ತಲ’ ಕಾಯ೯ಕ್ರಮ ಜುಲೈ 06 ರಂದು ಬೆಳಿಗ್ಗೆ 08 ಗಂಟೆಯಿಂದ ಸಂಜೆ 05 ಗಂಟೆ ತನಕ ತಾರಿಪಡ್ಪು ಕಂಬಳದಡ್ಡ ಗದ್ದೆಯಲ್ಲಿ ನಡೆಯಲಿದೆ.

ಬೆಳಿಗ್ಗೆ 8-30ಕ್ಕೆ ಶ್ರೀ ಕ್ಷೇತ್ರ ಬದನಡಿಯ ಪ್ರಧಾನ ಅರ್ಚಕರಾದ ಸುಂದರ ಹೊಳ್ಳ ಹಾಗೂ ಶ್ರೀಧರ ಪೂಜಾರಿ ಕಲ್ಲಗುಡ್ಡೆ ಅವರು ಕಾಯ೯ಕ್ರಮವನ್ನು ಉದ್ಘಾಟಿಸಲಿದ್ದಾರೆ.

ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್, ಉಳಿಪಾಡಿಗುತ್ತು ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಕಿನ್ನಾಜೆ, ಕರ್ಪೆ, ಚೆನ್ನಪ್ಪ ಕೋಟ್ಯಾನ್ ಅಧ್ಯಕ್ಷರು, ಬಿ.ಜೆ.ಪಿ. ಬಂಟ್ವಾಳ, ಸುದರ್ಶನ್, ಬಜೆ , ರಂಜನ್ ಶೆಟ್ಟಿ, ಅರಳ, ಯೋಗೀಶ್ ಪೂಜಾರಿ ಕರ್ಪೆ ಕ್ಲಾಸ್ 1 ಗುತ್ತಿಗೆದಾರರು, ಪ್ರದೀಪ್ ಪೂಜಾರಿ ಕುಕ್ಕಿಪಾಡಿ ಆಡಳಿತ ನಿರ್ದೇಶಕರು, ಸೂಕ್ತ ನ್ಯೂಸ್, ನೆಲ್ಸನ್ ವೇಗಸ್, ಸದಾನಂದ ಪೂಜಾರಿ, ಕರ್ಪೆ ಪರಿವಾರ ಕೆಟರಿಂಗ್, ಜಗದೀಶ್ ಆಳ್ವ, ಅಗ್ಗೊಂಡೆ ಅರಳ, ಸತೀಶ್ ಕುಮಾರ್ ಕಲ್ಲಮುಂಡ್ಕೂರು ಪ್ರಸಿದ್ಧ ಹಾಸ್ಯ ಕಲಾವಿದರು, ಪರೀಕ್ಷಿತ್, ವಿಲೇಜ್ ಅಕೌಂಟೆಂಟ್, ರಾಯಿ, ಶರತ್ ಕುಮಾರ್ ಮಹಾಲಕ್ಷ್ಮೀ ಸ್ಟೀಲ್ ಇಂಡಸ್ಟ್ರೀಸ್, ಕೊಲ್ಯ ಭಾಗವಹಿಸಲಿದ್ದಾರೆ.

ಸಂಜೆ 05 ಗಂಟೆಗೆ ಶ್ರೀ ದುರ್ಗಾದಾಸ್ ಶೆಟ್ಟಿ ಗಡಿ ಪ್ರಧಾನರು, ಬಲವಂಡಿ ಕ್ಷೇತ್ರ, ಮವಂತೂರು ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಸೋಮಪ್ಪ ಮಡಿವಾಳ, ರಾಯಿ ನಿವೃತ್ತ ಶಿಕ್ಷಕರು, ಶ್ರೀ ಉಮಾನಾಥ ಸಪಲ್ಯ ಬೊಳ್ಳೂರು ದೈವ ಪಾತ್ರಿ, ಶ್ರೀಮತಿ ಚೆಲುವಮ್ಮ ಶಾಂತಿಪಲ್ಕೆ ನಾಟಿವೈದ್ಯರು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಮುಖ್ಯ ಅತಿಥಿಯಾಗಿ ಸಿಲ್ವೆಸ್ಟರ್ ಫೆರ್ನಾಂಡಿಸ್, ಪುಂಚೋಡಿ ಪ್ರಗತಿಪರ ಕೃಷಿಕರು, ಶಿವಪ್ರಸಾದ್ ಶಾಂತಿ, ವಾಮದಪದವು, ರವಿ ಪೂಜಾರಿ, ಮುಗೇರುಗುಡ್ಡೆ, ಸಂದೇಶ್ ಶೆಟ್ಟಿ, ಪೊಡುಂಬ ನಿರ್ದೇಶಕರು, ಸಿ.ಎ. ಬ್ಯಾಂಕ್, ಸಿದ್ಧಕಟ್ಟೆ, ಸಂತೋಷ್ ಬೆಟ್ಟು ರಾಯಿ ಅಧ್ಯಕ್ಷರು, ರಾಯಿ ಗ್ರಾ. ಪಂ, ಲೋಕೇಶ್ ಕೈತ್ರೋಡಿ ಧರ್ಮದರ್ಶಿ, ಕೊರಗಜ್ಜ ಕ್ಷೇತ್ರ ಕೈತ್ರೋಡಿ, ಮಧುಕರ ಬಂಗೇರ, ಶಿವನಗರ ರಾಯಿ, ಶಿವಯ್ಯ ಎಸ್. ಎಲ್. ಅಧ್ಯಕ್ಷರು, ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಭಾಗವಹಿಸಲಿದ್ದಾರೆ ಎಂದು ಷಣ್ಮುಖ ಕಲಾತಂಡ ಬದನಡಿ ಕೊಯಿಲ ಇದರ ಅಧ್ಯಕ್ಷರಾದ ರವೀಂದ್ರ ಪೂಜಾರಿ, ಬದನಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *