ಫೇಸ್‌ಬುಕ್‌ನಲ್ಲಿ ರಿಕ್ಷಾ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ದೂರು ದಾಖಲು

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ದೊಂಡೋಲೆಯಲ್ಲಿ ರಿಕ್ಷಾ ಚಾಲಕನಿಗೆ ಫೇಸ್ಬುಕ್ ಖಾತೆಯ ಮೂಲಕ ಅವಾಚ್ಯ, ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಿರುವ ಘಟನೆ ನಡೆದಿದೆ.

ಜು. 1 ರಂದು ರಮೇಶ್ ಅವರು ಧರ್ಮಸ್ಥಳದ ಮಾಹಿತಿ ಕಚೇರಿ ಬಳಿ ರಿಕ್ಷಾ ಪಾರ್ಕ್‌ನಲ್ಲಿದ್ದ ಸಂದರ್ಭ ಫೇಸ್‌ಬುಕ್ ಖಾತೆ ತೆರೆದು ನೋಡಿದಾಗ ವಿಜಯ ವಿಜಿ ಎಂಬ ಫೇಸ್‌ಬುಕ್‌ಖಾತೆ ಯಲ್ಲಿ ಅಶ್ಲೀಲ ಪದಗಳನ್ನು ಬಳಸಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಫೇಸ್‌ಬುಕ್ ಖಾತೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖೀಸಿದ್ದು ದೂರು ದಾಖಲಿಸಲಾಗಿದೆ.

Leave a Reply

Your email address will not be published. Required fields are marked *