Breaking
3 Feb 2026, Tue

ಮಂಜೇಶ್ವರ : ಹಲ್ಲೆ ಪ್ರಕರಣ- ಆರೋಪಿಯೋರ್ವ ಅರೆಸ್ಟ್‌

ಮಂಜೇಶ್ವರ: ಇಬ್ಬರು ವ್ಯಕ್ತಿಗಳಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೋರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಮಚ್ಚಂಪಾಡಿ ನಿವಾಸಿ ಅಬ್ದುಲ್ ಜಬ್ಬಾರ್ (37) ಬಂಧಿತ ಆರೋಪಿಯಾಗಿದ್ದಾನೆ.

ಪಾವೂರು ಕೋಡಿ ಮನೆಯ ಅಬ್ದುಲ್ ಖಾದರ್ (35) ಮತ್ತು ಮಹಮ್ಮದ್ ಜಾಫರ್ ( 31) ರವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದ್ದು, ಅಲ್ಲದೆ ಹೊಸಂಗಡಿ ಯಾಕೂಬ್, ಮುಬಾರಕ್ ಮತ್ತು ಅಶ್ರಫ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *