ಬೆಂಗಳೂರು: ದರೋಡೆಕೋರರ ತಂಡವೊಂದು ಹಾಡುಹಗಲೇ 2 ಕೋಟಿ ರೂಪಾಯಿ ಹಣ ದರೋಡೆಗೈದ ಘಟನೆ ವಿದ್ಯಾರಣ್ಯಪುರಂನ ಎಂಎಸ್ ಪಾಳ್ಯದ ಎಕೆ ಎಂಟರ್ ಪ್ರೈಸ್ ಶಾಪ್‌ನಲ್ಲಿ ನಡೆದಿದೆ.

ಕೆಂಗೇರಿಯ ಶ್ರೀಹರ್ಷ ಹಣ ಕಳೆದುಕೊಂಡವರು.
ಶ್ರೀಹರ್ಷ ಅವರ ಹೊಸ ಕಂಪನಿಗೆ ಜಪಾನ್‌ನಿಂದ ಯಂತ್ರ ತರಿಸಲು ತಮ್ಮ ಬಳಿ ಇದ್ದ 2 ಕೋಟಿ ರೂ. ಹಣವನ್ನು USDT ಡಾಲರ್ ಮೂಲಕ ಕ್ರಿಸ್ಟೋಕರೆನ್ಸಿಗೆ ರೂ ಡಾಲರ್ ರೂಪಕ್ಕೆ ಪರಿವರ್ತಿಸಲು ಮುಂದಾಗಿದ್ದರು. ಈ ವೇಳೆ ಸ್ನೇಹಿತರ ಮೂಲಕ ಜೂನ್ 25ರಂದು ಮಧ್ಯಾಹ್ನ 3 ಗಂಟೆಯಲ್ಲಿ ಬೆಂಜಮಿನ್ ಹರ್ಷ ಎಂಬಾತ ಎ.ಕೆ. ಎಂಟರ್ ಪ್ರೈಸ್ ಶಾಪ್‌ನಲ್ಲಿ ಶ್ರೀಹರ್ಷಗೆ ಭೇಟಿಯಾಗಿದ್ದ. ಬಳಿಕ ಬೆಂಜಮಿನ್ ಮತ್ತು ಇಬ್ಬರು ಸ್ನೇಹಿತರು 2 ಕೋಟಿ ಹಣ ಎಣಿಕೆ ಮಾಡುತ್ತಿದ್ದರು. ಇದೇ ವೇಳೆ 6-7 ಆಗಂತುಕರು ಶಾಪ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಬಳಿಕ ಶ್ರೀಹರ್ಷ ಕುತ್ತಿಗೆಗೆ ಚಾಕು ಇಟ್ಟು, ಶಾಪ್‌ನಲ್ಲಿದ್ದ ಶ್ರೀ ಹರ್ಷ, ಬೆಂಜಮಿನ್ ಮತ್ತು ಸ್ನೇಹಿತರನ್ನು ಕೂಡಿ ಹಾಕಿ 2 ಕೋಟಿ ಹಣ ಚೀಲಕ್ಕೆ ತುಂಬಿಕೊಂಡು ಎಸ್ಕೆಪ್ ಆಗಿದ್ದಾರೆ. ಈ ಘಟನೆಯ ಬಗ್ಗೆ ಶ್ರೀಹರ್ಷ ದೂರು ನೀಡಿದ್ದಾರೆ.
ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಮುಂದುವರಿದಿದೆ.



