ಬೆಳ್ತಂಗಡಿ: ತಾಲೂಕಿನ ಶಿಶಿಲದ ಕಪಿಲ ನದಿಯಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಮತ್ಸ್ಯ ಕ್ಷೇತ್ರವೆಂದೇ ಪ್ರಸಿದ್ಧವಾಗಿರುವ ಶಿಶಿಲೇಶ್ವರ ದೇವಾಲಯಕ್ಕೆ ನೀರು ನುಗ್ಗಿದೆ.

ಜೂ.25ರ ಬುಧವಾರ ಭಾರೀ ಮಳೆ ಸುರಿದ ಪರಿಣಾಮ ಶಿಶಿಲೇಶ್ವರ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ. ನದಿಯ ಅಕ್ಕಪಕ್ಕದ ತೋಟಗಳಿಗೆ ನೀರು ನುಗ್ಗಿ ಅಪಾರ ಹಾನಿ ಯಾಗಿವೆ . ಆ ಭಾಗದ ಜನರಿಗೆ ಸಂಚಾರಕ್ಕೆ ಕಷ್ಟವಾಗಿದೆ ಎಂದು ಪಂಚಾಯತ್ ಅಧ್ಯಕ್ಷ ಸುಧೀನ್ ಡಿ. ತಿಳಿಸಿದ್ದಾರೆ.

ಪಕ್ಕದಲ್ಲೇ ಇರುವ ಕಿಂಡಿ ಆಣೆಕಟ್ಟು (ದೇವಳದ ಸಂಪರ್ಕ ರಸ್ತೆ) ನೀರಿನಿಂದ ಸಂಪೂರ್ಣ ಮುಳುಗಡೆಯಾಗಿದ್ದು ಸದ್ಯಕ್ಕೆ ಅಲ್ಲಿರುವ ತೂಗು ಸೇತುವೆ ವರೆಗೂ ನೀರು ಹರಿಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

