Breaking
11 Aug 2025, Mon

ಮಂಗಳೂರು : ನಿವೃತ ಬ್ಯಾಂಕ್‌ ಉದ್ಯೋಗಿ ಆತ್ಮಹತ್ಯೆ

ಮಂಗಳೂರು : ಕೊಡಿಯಾಲ್ ಬೈಲ್ ನಲ್ಲಿರುವ ಕೆನರಾ ಬ್ಯಾಂಕ್‌ನ ನಿವೃತ್ತ ಉದ್ಯೋಗಿಯೊಬ್ಬರು ಬ್ಯಾಂಕ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.25 ರಂದು ನಡೆದಿದೆ.

ಮೃತಪಟ್ಟವರು ಅಳಕೆ ನಿವಾಸಿ ಗಿರಿದರ್ ಯಾದವ್ (61) ಎಂದು ಗುರುತಿಸಲಾಗಿದೆ.

ಗಿರಿಧರ್ ಯಾದವ್ ಅವರು ರಾಜ್ಯಮಟ್ಟದ ಪವರ್ ಲಿಪ್ಟರ್ ಆಗಿದ್ದು, ಹಲವಾರು ಪದಕಗಳನ್ನು ಗಳಿಸಿದ್ದಾರೆ. ಅವರಿಗೆ ಆರೋಗ್ಯದ ಸಮಸ್ಯೆಯಿತ್ತು ಎಂದು ಹೇಳಲಾಗಿದೆ.

ಸುಮಾರು 40 ವರ್ಷಗಳ ಕಾಲ ಕೆನರಾ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ನಿವೃತ್ತಿ ಹೊಂದಿದ್ದರು ಆದರೂ ಬ್ಯಾಂಕ್ ನ ಮೇಲಿನ ಪ್ರೀತಿಗೆ ಬ್ಯಾಂಕ್ ಗೆ ಬಂದು ಹೋಗುತ್ತಿದ್ದರು ಎಂದು ಹೇಳಲಾಗಿದೆ.

ನಿನ್ನೆ ಬ್ಯಾಂಕ್ ಗೆ ಬಂದವರು ಮತ್ತೆ ಮನೆಗೆ ಹಿಂದಿರುಗಿರಲ್ಲಿಲ್ಲ. ಈ ಹಿನ್ನೆಲೆ ಗಿರಿದರ್ ಅವರ ಪತ್ನಿ ಬಂದರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕುರಿತಂತೆ ದೂರು ದಾಖಲಿಸಿದ್ದರು .

ಇಂದು ಬೆಳಿಗ್ಗೆ ಬ್ಯಾಂಕ್ ಬಾಗಿಲು ತೆರೆದಾಗ ಬ್ಯಾಂಕ್ ನ ಸ್ಟೋರ್ ರೂಂ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಸಾವಿಗೆ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *