Breaking
22 Mar 2026, Sun

ಬೆಳಾಲು ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಉದ್ಘಾಟನೆ

ಬೆಳಾಲು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಉದ್ಘಾಟನಾ ಕಾರ್ಯಕ್ರಮ ಜೂನ್ 25ರಂದು ನಡೆಯಿತು.

ಗೌರವ ರಾಜ್ಯಪಾಲ, ಶಾಲಾ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಪ್ರಮಾಣ ವಚನ ಬೋಧಿಸಿದರು. ಬಳಿಕ ಅವರು ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ತಿಳಿದುಕೊಳ್ಳಲು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿ ಸರ್ಕಾರ ಸಹಕಾರಿಯಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿ ನಾಯಕ ಮೋಹನ್ ಕೃಷ್ಣ ವಾರ್ಷಿಕ ಯೋಜನೆ ಮಂಡಿಸಿದರು . ಶಿಕ್ಷಕ ಕಿರಣ್ ಕಾರ್ಯಕ್ರಮ ಸಂಘಟಿಸಿದರು. ಇತರ ಶಿಕ್ಷಕರು ಉಪಸ್ಥಿತರಿದ್ದರು. ಉಪನಾಯಕಿ ನೇತ್ರಾವತಿ ಸ್ವಾಗತಿಸಿ, ವಿರೋಧ ಪಕ್ಷದ ನಾಯಕಿ ರಕ್ಷಾ ಎನ್. ವಂದಿಸಿದರು‌. ಕಾರ್ಯದರ್ಶಿ ಮನೀಷ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *