Breaking
25 Sep 2026, Fri

ಪಡುಬಿದ್ರಿ: ಚಪ್ಪಲಿ ಖರೀದಿಸಿ ಬರುವುದಾಗಿ ಹೇಳಿ ಪೇಟೆಗೆ ಹೋಗಿದ್ದ ವ್ಯಕ್ತಿ ನಾಪತ್ತೆ

ಪಡುಬಿದ್ರಿ: ಪಲಿಮಾರಿನ ತನ್ನ ಮನೆಯಿಂದ ಚಪ್ಪಲಿ ಖರೀದಿಸಿ ಬರುವುದಾಗಿ ಹೇಳಿ ಪೇಟೆಗೆ ಹೋಗಿದ್ದ ಮಹಮ್ಮದ್‌ ಕಬೀರ್‌ (25) ನಾಪತ್ತೆಯಾಗಿತ್ತಾರೆ.

ಅವರು 5.5 ಅಡಿ ಎತ್ತರ, ಬಿಳಿ ಮೈಬಣ್ಣ ಹಾಗೂ ತೆಳ್ಳನೆ ಶರೀರದವರಾಗಿದ್ದು, ತುಳು, ಬ್ಯಾರಿ ಹಾಗೂ ಕನ್ನಡ ಭಾಷೆ ಬಲ್ಲವರಾಗಿದ್ದಾರೆ.

ಬಿಳಿ ಬಣ್ಣದ ತುಂಬು ತೋಳಿನ ಶರ್ಟು ಹಾಗೂ ಪ್ಯಾಂಟು ಧರಿಸಿರುತ್ತಾರೆ. ಅವರ ಬಗ್ಗೆ ಯಾರಿಗಾದರೂ ತಿಳಿದು ಬಂದಲ್ಲಿ ಪಡುಬಿದ್ರಿ ಪೊಲೀಸ್‌ ಠಾಣೆಯ ಸಂಖ್ಯೆ 0820 2555452 ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *