Breaking
22 Mar 2026, Sun

ಲಾಯಿಲದಲ್ಲಿ ಕಬಡ್ಡಿ ಆಟಗಾರ ಅನಾರೋಗ್ಯದಿಂದ ನಿಧನ

ಬೆಳ್ತಂಗಡಿ: ಅಲ್ಪಕಾಲದ ಅನಾರೋಗ್ಯದಿಂದ ಕಬಡ್ಡಿ ಆಟಗಾರನೊಬ್ಬ ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿ ಮಂಗಳವಾರ ಸಂಭವಿಸಿದೆ.

ಮೃತಪಟ್ಟ ಕಬಡ್ಡಿ ಆಟಗಾರನನ್ನು ಲಾಯಿಲ ಗ್ರಾಮದ ವಿವೇಕಾನಂದ ನಗರದ ಸೋಮಣ್ಣ ಕುಂಬಾರ ಅವರ ಪುತ್ರ ಸಂದೀಪ್‌ ಕುಲಾಲ್‌ (28) ಎಂದು ಗುರುತಿಸಲಾಗಿದೆ.

ಸಂದೀಪ್ ಕೆಲವು ದಿನಗಳ ಹಿಂದೆ ಜಾಂಡೀಸ್‌ ರೋಗಕ್ಕೆ ತುತ್ತಾಗಿದ್ದು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಇತ್ತೀಚೆಗೆ ಎರಡು ದಿನಗಳಿಂದ ಮತ್ತೆ ಜ್ವರ ಉಲ್ಬಣಗೊಂಡ ಪರಿಣಾಮ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ತಂದೆ, ತಾಯಿ, ಪತ್ನಿ, ಐದು ತಿಂಗಳ ಮಗು ಹಾಗೂ ಸಹೋದರನನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *