Breaking
25 Sep 2026, Fri

ಸ್ಕೂಟರ್ ಗೆ ಬುಲೆರೋ ಜೀಪ್ ಡಿಕ್ಕಿ

ಪುಂಜಾಲಕಟ್ಟೆ: ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಬೊಲೆರೋ ಜೀಪ್ ಢಿಕ್ಕಿ ಹೊಡೆದ ಘಟನೆ ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಕಾವಳಮೂಡೂರು ಗ್ರಾಮದ ಎನ್.ಸಿ. ರೋಡ್ ಎಂಬಲ್ಲಿ ಜೂನ್ 24 ರಂದು ನಡೆದಿದೆ.

ರಸ್ತೆ ಬದಿ ಇದ್ದ ಸ್ಕೂಟರ್ ಗೆ ಬೊಲೆರೋ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ನಜ್ಜುಗುಜ್ಜಾಗಿದೆ.

ಮಡಂತ್ಯಾರು ಕಡೆಗೆ ಹೋಗುತ್ತಿದ್ದ ಬೊಲೆರೋ, ನೆಲ್ಲಿಗುಡ್ಡೆ ಕಡೆಯಿಂದ ವೇಗವಾಗಿ ಬಂದು, ರಸ್ತೆಯು ದಾಟುತ್ತಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆಯದಂತೆ ತಪ್ಪಿಸಲು ಚಾಲಕ ಬದಿಗೆ ತಿರುಗಿಸಿದ ವೇಳೆ, ನಿಯಂತ್ರಣ ತಪ್ಪಿ ಮೆಡಿಕಲ್ ಅಂಗಡಿಯ ಮಹಿಳಾ ಸಿಬ್ಬಂದಿಯ ಸ್ಕೂಟರ್‌ಗೆ ಡಿಕ್ಕಿಯಾಗಿ ಚರಂಡಿಗೆ ಬಿದ್ದಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ .

Leave a Reply

Your email address will not be published. Required fields are marked *